TOP NEWS
Money Laundering Probe ED Raids Attica Gold Premises Over Alleged Stolen Gold Purchases

ED: ಅಟ್ಟಿಕಾ ಗೋಲ್ಡ್‌ಗೆ ಇಡಿ ಶಾಕ್: ಬೆಂಗಳೂರು, ಚೆನ್ನೈ ಸೇರಿ 16 ಕಡೆ ಭಾರಿ ದಾಳಿ, ನಗದು-ಬಂಗಾರ ಜಪ್ತಿ!

ಬೆಂಗಳೂರು: ಕಳವು ಮಾಡಲಾದ ಚಿನ್ನವನ್ನು ಕಾನೂನುಬಾಹಿರವಾಗಿ ಖರೀದಿ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡುತ್ತಿದ್ದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಪ್ರಸಿದ್ಧ ‘ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಇ ಜಾರಿ ನಿರ್ದೇಶನಾಲಯ (ED) ಭಾರಿ ಆಘಾತ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಕ್ರಮ ಕೈಗೊಂಡಿರುವ ಇಡಿ ಅಧಿಕಾರಿಗಳು, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿರುವ ಅತ್ತಿಕಾ ಗೋಲ್ಡ್‌ ಸಂಸ್ಥೆಯ ಆಡಳಿತ ನಿರ್ದೇಶಕರು, ಪ್ರಮುಖ ಕಾರ್ಯನಿರ್ವಾಹಕರು ಮತ್ತು ಸಹಚರ ಪಿ.ಎಸ್….

Read More
HD Kumaraswamy Releases Audio Tapes Alleging DK Shivakumar Disrespected Siddaganga Mutt Seer Over Land Dispute

HD Kumaraswamy: ಡಿಕೆಶಿ ಕುಟುಂಬದ ವಿರುದ್ಧ ಹೆಚ್‌ಡಿಕೆ ಬಿಗ್ ಆಡಿಯೋ ಬಾಂಬ್: ಸಿದ್ಧಗಂಗಾ ಮಠದ ಆಸ್ತಿ, ನೈಸ್ ಭೂಕಬಳಿಕೆ ಆರೋಪ!

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕುಟುಂಬದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತೊಮ್ಮೆ ಗಂಭೀರ ಮಾದರಿಯ ಭೂಕಬಳಿಕೆ ಆರೋಪಗಳನ್ನು ಮಾಡಿ ಭಾರಿ ರಾಜಕೀಯ ಸಂಚಲನ ಮೂಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬದವರು ನಡೆಸಿರುವ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಮತ್ತು ಧ್ವನಿ ಸುರುಳಿಯನ್ನು (Audio Clip) ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. 2003ರಲ್ಲಿ ಕೇವಲ 4 ಕೋಟಿ ರೂಪಾಯಿ ಇದ್ದ…

Read More
BJP Leader NR Ramesh Files Lokayukta Complaint Against Yatindra Siddaramaiah over Alleged Tender Fraud

Yathindra Siddaramaiah: ಡಿಪಿಎಆರ್‌ನಲ್ಲಿ 444 ಕೋಟಿ ರೂ. ಟೆಂಡರ್ ಅಕ್ರಮ ಆರೋಪ: ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಬೆಂಗಳೂರು: ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಡಿಯಲ್ಲಿ ಬರುವ ‘ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ’ (KSDC) ಹಾಗೂ ‘ಕರ್ನಾಟಕ ರಾಜ್ಯ ವ್ಯಾಪಕ ಪ್ರದೇಶ ಜಾಲ’ (KSWAN) ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುಮಾರು 444 ಕೋಟಿ ರೂಪಾಯಿ ಮೌಲ್ಯದ ಈ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಮತ್ತು ಹಿರಿಯ ಐಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ…

Read More
Aishwarya Rai Bachchan Takes Over Paris Fashion Week 2026 Runway in Dramatic Black Couture and Tiara

Aishwarya Rai: ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ರಾಯಲ್ ಜಾದೂ: ಕಪ್ಪು ವೆಲ್ವೆಟ್ ಗೌನ್‌ನಲ್ಲಿ ಮಿಂಚಿದ ಬಾಲಿವುಡ್ ಕ್ವೀನ್!

ಮುಂಬೈ: ಪ್ಯಾರಿಸ್‌ನ ಪ್ರತಿಷ್ಠಿತ ‘ಲೊರಿಯಲ್ ಪ್ಯಾರಿಸ್’ ಫ್ಯಾಷನ್ ಶೋ ರ‍್ಯಾಂಪ್ ಮೇಲೆ ಬಾಲಿವುಡ್ ಸುಂದರಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ತಮ್ಮ ರಾಯಲ್ ಹಾಗೂ ಮನಮೋಹಕ ಲುಕ್‌ನಿಂದ ವೀಕ್ಷಕರ ಕಣ್ಣು ಕೋರೈಸಿದ್ದಾರೆ. ಐಫೆಲ್ ಟವರ್ ಹಾಗೂ ಎಕೋಲ್ ಮಿಲಿಟೇರ್ ಹಿನ್ನೆಲೆಯಲ್ಲಿ ಪ್ಲೇಸ್ ಜಾಫ್ರೆನಲ್ಲಿ ನಡೆದ ಈ ಸಾಂಸ್ಕೃತಿಕ ಫ್ಯಾಷನ್ ಸಂಭ್ರಮದಲ್ಲಿ ಐಶ್ವರ್ಯಾ ರೈ ಕಾಲಿಡುತ್ತಿದ್ದಂತೆ ಇಡೀ ರ‍್ಯಾಂಪ್ ಪ್ರೇಕ್ಷಕರ ಕರತಾಡನದಿಂದ ಮೊಳಗಿತು. ಶಿರಸಿನಿಂದ ಪಾದದವರೆಗೆ ಸಂಪೂರ್ಣ ಕಪ್ಪು ವರ್ಣದ (All-Black) ವಸ್ತ್ರವನ್ನು…

Read More
Union Minister HD Kumaraswamy Releases Audio Clips Alleging Massive Irregularities in NICE Project

Big News: ನೈಸ್ ಅಕ್ರಮದ ಆಡಿಯೋ ಬಾಂಬ್ ಸಿಡಿಸಿದ ಹೆಚ್‌ಡಿಕೆ: ಡಿಕೆ ಶಿವಕುಮಾರ್, ಅಶೋಕ್ ಖೇಣಿ ವಿರುದ್ಧ ಗಂಭೀರ ಆರೋಪ!

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಜಿದ್ದಾಜಿದ್ದು ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ (Big News) ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನೈಸ್ (NICE) ಯೋಜನೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಕೇವಲ ದಾಖಲೆಗಳನ್ನು ಮಾತ್ರವಲ್ಲದೆ, ಅಲ್ಲೋಲ-ಕಲ್ಲೋಲ ಸೃಷ್ಟಿಸುವಂತಹ ಎರಡು ಪ್ರತ್ಯೇಕ ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ನೈಸ್ ಸಂಸ್ಥೆಯ ಅಶೋಕ್ ಖೇಣಿ ಮಾತನಾಡಿದ್ದಾರೆ…

Read More
Limit Salt Intake to Under 5g Daily Karnataka Health Advisory to Public Hotels, and Schools

Health Guidelines: ಬಿಪಿ, ಹಾರ್ಟ್ ಅಟ್ಯಾಕ್ ತಡೆಗೆ ಆರೋಗ್ಯ ಇಲಾಖೆ ಬಿಗ್ ಅಲರ್ಟ್: ಉಪ್ಪು ಬಳಕೆಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್ ಪ್ರಕಟ!

ಬೆಂಗಳೂರು: ರಾಜ್ಯದಲ್ಲಿ ಅತಿಯಾದ ಉಪ್ಪಿನ ಸೇವನೆಯಿಂದಾಗಿ ರಕ್ತದೊತ್ತಡ (BP) ಹಾಗೂ ಹೃದಯಾಘಾತ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು (Health Guidelines) ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಆರೋಗ್ಯ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಮಹತ್ವದ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 5 ಗ್ರಾಂಗಿಂತ (ಒಂದು ಚಮಚ) ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದ್ದರೂ, ಪ್ರಸ್ತುತ ಸಾರ್ವಜನಿಕರು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿನ ಉಪ್ಪನ್ನು ಸೇವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ…

Read More
It Will Be Special SS Rajamouli on Potential Project with Suriya

SS Rajamouli: ನಟ ಸೂರ್ಯ ಜೊತೆ ಸಿನಿಮಾ ಯಾವಾಗ? ರಾಜಮೌಳಿ ನೀಡಿದ ಸಸ್ಪೆನ್ಸ್ ಉತ್ತರ!

ಹೈದರಾಬಾದ್:‌ ಭಾರತೀಯ ಚಿತ್ರರಂಗದ ದೈತ್ಯ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಹಾಗೂ ತಮಿಳಿನ ಸ್ಟಾರ್ ನಟ ಸೂರ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ. ಖ್ಯಾತ ನಿರ್ದೇಶಕ ಶಶಾಂಕ್ ಯೇಲೇಟಿ ನಿರ್ದೇಶನದ, ಮಲಯಾಳಂ ಮೂಲದ ನಟ ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾದ ಪ್ರಿ-ರಿಲೀಸ್ ಸಮಾರಂಭಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೇ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಸೂರ್ಯ ಸಹ ಭಾಗಿಯಾಗಿದ್ದರು. ಈ ವಿಶೇಷ…

Read More