Vantara: ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಪುತ್ರನ ಎಂಟ್ರಿ: ಎ2 ಗಿರ್ ಹಸುವಿನ ಹಾಲಿನ ‘ವಂತಾರಾ ಕ್ರೀಮರಿ’ ಈಗ ಮುಂಬೈನಲ್ಲಿ ಲಭ್ಯ!
ಮುಂಬೈ: ವನ್ಯಜೀವಿಗಳ ರಕ್ಷಣೆಗಾಗಿ ‘ವಂತಾರಾ’ (Vantara) ಎಂಬ ಬೃಹತ್ ಅಭಿಯಾನ ಆರಂಭಿಸಿದ್ದ ಅನಂತ್ ಅಂಬಾನಿ, ಈಗ ಆಹಾರ ಮತ್ತು ಜೀವನಶೈಲಿ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮುಖೇಶ್ ಅಂಬಾನಿ ಅವರ ಪುತ್ರನ ಈ ಹೊಸ ಸಾಹಸದ ಭಾಗವಾಗಿ ‘ವಂತಾರಾ ಕ್ರೀಮರಿ’ ಎಂಬ ಆರ್ಟಿಸನಲ್ ಐಸ್‌ಕ್ರೀಂ ಬ್ರ್ಯಾಂಡ್ ಮುಂಬೈನಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಗಿರ್ ಹಸುವಿನ ಹಾಲಿನ ವಿಶೇಷತೆ ಈ ಐಸ್‌ಕ್ರೀಂಗಳ ಪ್ರಮುಖ ಆಕರ್ಷಣೆಯೇ ಅದರ ಶುದ್ಧತೆ. ಎ2 ದರ್ಜೆಯ ಗಿರ್ ಹಸುಗಳ ಹಾಲಿನಿಂದ ತಯಾರಿಸಲಾದ ಈ ಐಸ್‌ಕ್ರೀಂಗಳು ನೈಸರ್ಗಿಕ ರುಚಿಯನ್ನು…
