Uber: ಬೃಹತ್ ಉದ್ಯೋಗ ಕಡಿತದ ಬೆನ್ನಲ್ಲೇ ಕಠಿಣ ಹೊಸ ರೂಲ್ಸ್ ಜಾರಿ ಮಾಡಿದ ಉಬರ್
ನವದೆಹಲಿ: ಜಾಗತಿಕ ಮಟ್ಟದಲ್ಲಿ ಸುಮಾರು 3,300 ಉದ್ಯೋಗಗಳನ್ನು ಕಡಿತಗೊಳಿಸುವ ಮೂಲಕ ಭಾರೀ ಸಂಚಲನ ಮೂಡಿಸಿದ್ದ ಖ್ಯಾತ ರೈಡ್-ಹೇಲಿಂಗ್ ದೈತ್ಯ ಸಂಸ್ಥೆ ಉಬರ್ (Uber), ಇದೀಗ ತನ್ನ ಉದ್ಯೋಗಿಗಳಿಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಕಂಪನಿಯು ತನ್ನ ರಿಮೋಟ್ ವರ್ಕ್ ಅಥವಾ ಮನೆಯಿಂದಲೇ ಕೆಲಸ ಮಾಡುವ (WFH) ನೀತಿಯನ್ನು ಅತ್ಯಂತ ಕಠಿಣಗೊಳಿಸಲು ಮುಂದಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಉಬರ್ ಸಂಸ್ಥೆಯು ಜಾರಿಗೆ ತರುತ್ತಿರುವ ಹೊಸ ನಿಯಮಗಳ ಅಡಿಯಲ್ಲಿ, ಇನ್ನು ಮುಂದೆ ಕೇವಲ ಶೇಕಡಾ 1ರಷ್ಟು ಉದ್ಯೋಗಿಗಳಿಗೆ…
