Swiggy: ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಕುಮಾರ್ ಝಾ ರಾಜೀನಾಮೆ
ನವದೆಹಲಿ: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ವಿಭಾಗವಾದ ‘ಇನ್‌ಸ್ಟಾಮಾರ್ಟ್’ನ (Swiggy) ಆಡಳಿತ ಮಂಡಳಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಪ್ರಸ್ತುತ ಸಿಇಒ ಆಗಿರುವ ಅಮಿತೇಶ್ ಕುಮಾರ್ ಝಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಂಪನಿಯಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಅವರ ಜಾಗಕ್ಕೆ ಮಿಂಟ್ರಾ ಸಂಸ್ಥೆಯ ಮಾಜಿ ಸಿಇಒ ನಂದಿತಾ ಸಿನ್ಹಾ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಸ್ವಿಗ್ಗಿ ನೇಮಕ ಮಾಡಿದೆ. ಆಸಕ್ತಿದಾಯಕ ವಿಚಾರವೆಂದರೆ, ಜುಲೈ 28 ರಂದು ಅಮಿತೇಶ್ ತಮ್ಮ ರಾಜೀನಾಮೆ ಸಲ್ಲಿಸಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ…
