Lift Mishap: ಹೋಟೆಲ್ ಲಿಫ್ಟ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಆರು ಪ್ರವಾಸಿಗರಿಗೆ ಗಾಯ
ಜಮ್ಮು-ಕಾಶ್ಮೀರ: ಶ್ರೀನಗರದ ಹೈದರ್ ಪೋರಾ ಪ್ರದೇಶದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸಂಭವಿಸಿದ ಲಿಫ್ಟ್ (Lift Mishap) ಅಪಘಾತದಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಆರು ಮಂದಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಲಿಫ್ಟ್ ತಾಂತ್ರಿಕ ದೋಷದಿಂದಾಗಿ ಹಠಾತ್ತನೆ ಕುಸಿದಿದ್ದು, ಒಳಗಿದ್ದ ಪ್ರವಾಸಿಗರಿಗೆ ಗಾಯಗಳಾಗಿವೆ. ಕೂಡಲೇ ಎಚ್ಚೆತ್ತ ತುರ್ತು ಸೇವಾ ಸಿಬ್ಬಂದಿ, ಗಾಯಾಳುಗಳನ್ನು ಬರ್ಜುಲ್ಲಾದ ಮೂಳೆ ಮತ್ತು ಕೀಲು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ ವೈದ್ಯರ ಮಾಹಿತಿಯ ಪ್ರಕಾರ, ಗಾಯಾಳುಗಳ ಕಾಲು ಮತ್ತು ದೇಹದ ಕೆಳಭಾಗಕ್ಕೆ ಪೆಟ್ಟಾಗಿದೆ. ಸದ್ಯ…
