Narendra Modi: ತೈಲ ಬಿಕ್ಕಟ್ಟಿಗೆ ದೇಶಾದ್ಯಂತ ಮಿತವ್ಯಯದ ಬ್ರೇಕ್: ಕೇಂದ್ರ ಮತ್ತು ವಿವಿಧ ರಾಜ್ಯಗಳ ಮಹತ್ವದ ಕ್ರಮಗಳು
ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ತೈಲ ಬಿಕ್ಕಟ್ಟನ್ನು ಎದುರಿಸಲು ಮತ್ತು ವಿದೇಶಿ ವಿನಿಮಯ ಮೀಸಲನ್ನು ಕಾಯ್ದುಕೊಳ್ಳಲು ಕೇಂದ್ರ ಹಾಗೂ ದೇಶದ ವಿವಿಧ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಮಿತವ್ಯಯ ಕ್ರಮಗಳಿಗೆ ಮುಂದಾಗಿವೆ. ಪ್ರಧಾನಿ ಮೋದಿಯವರ (Narendra Modi) ಸಲಹೆಯ ಮೇರೆಗೆ ಆಡಳಿತ ವ್ಯವಸ್ಥೆಯಲ್ಲಿ ಇಂಧನ ವ್ಯಯವಾಗುವುದನ್ನು ತಡೆಯಲು ಭಾರಿ ಬದಲಾವಣೆಗಳನ್ನು ತರಲಾಗುತ್ತಿದೆ. ಮಾದರಿಯಾದ ಕೇಂದ್ರ ಸರ್ಕಾರ: ಮಿತವ್ಯಯದ ಹಾದಿಯಲ್ಲಿ ಕೇಂದ್ರ ಸರ್ಕಾರವೇ ಮೊದಲ ಹೆಜ್ಜೆ ಇಟ್ಟಿದ್ದು, ಪ್ರಧಾನಮಂತ್ರಿಯವರ ಅಧಿಕೃತ ಎಸ್‌ಪಿಜಿ (SPG) ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇಕಡಾ…
