DK Shivakumar: ಗಾಂಧಿ ಕುಟುಂಬಕ್ಕೆ ಡಿಕೆಶಿ ಭಾವನಾತ್ಮಕ ಪತ್ರ: ರಾಜಕೀಯ ಪಯಣ ನೆನೆದು ಕೃತಜ್ಞತೆ!
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸೂತ್ರ ಹಿಡಿಯಲಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು, ಗಾಂಧಿ ಕುಟುಂಬದೊಂದಿಗೆ ತಮಗಿರುವ ದಶಕಗಳ ಕಾಲದ ಭಾವನಾತ್ಮಕ ನಂಟನ್ನು ನೆನಪಿಸಿಕೊಂಡು ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ರಾಜಕೀಯ ಬದುಕಿನ ಏಳುಬೀಳುಗಳ ವಿವಿಧ ಹಂತಗಳಲ್ಲಿ ಗಾಂಧಿ ಪರಿವಾರದ ನಾಯಕರು ತಮಗೆ ನೀಡಿದ ಅಪ್ರತಿಮ ಬೆಂಬಲ, ನಂಬಿಕೆ ಮತ್ತು ಪ್ರೋತ್ಸಾಹವನ್ನು ಸ್ಮರಿಸಿ ಅವರು ಸುದೀರ್ಘವಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, “ನನ್ನ ಇಂದಿನ…
