Big News: ಸಿ.ವಿ. ರಾಮನ್ ಬಡಾವಣೆ ವಿರುದ್ಧ ‘ನಮ್ಮನೆ ಪ್ರಶಾಂತ್’ ಅಪಪ್ರಚಾರ: ನಿರ್ಮಾಣಕಾರ ರಾಮನ್ ತೀವ್ರ ಆಕ್ಷೇಪ!
ಚಾಮರಾಜನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸಮೀಪ ನಿರ್ಮಿಸಲಾಗಿರುವ ನೂತನ ಸಿ.ವಿ. ರಾಮನ್ ಬಡಾವಣೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (Big News) ಹರಿದಾಡುತ್ತಿರುವ ಮಾಹಿತಿಗಳಿಗೆ ಸಂಬಂಧಿಸಿದಂತೆ ಬಡಾವಣೆಯ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಬಡಾವಣೆಯ ಬಗ್ಗೆ ಕೆಲವು ಆಕ್ಷೇಪಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಪರಿಶೀಲಿಸಿ ಸಾರ್ವಜನಿಕರು ನಿರ್ಧಾರ ಕೈಗೊಳ್ಳಬೇಕು ಎಂದು ಬಡಾವಣೆಯ ನಿರ್ಮಾಪಕ ರಾಮನ್ ಮನವಿ ಮಾಡಿದ್ದಾರೆ. ಏನಿದು ಪ್ರಕರಣ? ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಚೂಡಾ)…
