Sagara: ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಬಂದ್: ಹೊಸ ಲಾಂಚ್ ಆರಂಭಿಸುವಂತೆ ಆಗ್ರಹ!
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಿಗಂದೂರು ಹಾಗೂ ವಡನ್‌ಬೈಲು ನಡುವಿನ ಸಾರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಮುಪ್ಪಾನೆ ಲಾಂಚ್ ಸೇವೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಈ ಭಾಗದ ಸಾರ್ವಜನಿಕರು ಮತ್ತು ಪ್ರವಾಸಿಗರು ತೀವ್ರ ಪರದಾಡುವಂತಾಗಿದೆ. ಲಾಂಚ್ ಸೇವೆ (Sagara) ನಿಂತುಹೋಗಿರುವುದರಿಂದ ದ್ವೀಪ ಹಾಗೂ ನದಿ ತೀರದ ಗ್ರಾಮಗಳ ಜನರ ದೈನಂದಿನ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಸ್ಥಳೀಯರು ತಕ್ಷಣವೇ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೊಳೆಬಾಗಿಲು ಲಾಂಚ್ ಬಳಕೆಗೆ ಆಗ್ರಹ ಪ್ರಸ್ತುತ ಹೊಳೆಬಾಗಿಲಿನಲ್ಲಿ ಲಾಂಚ್…
