Shivam Scam: ಕೋಟಿ ಕೋಟಿ ವಂಚನೆ ಕೇಸ್: ಶಿವಾನಂದ ನೀಲಣ್ಣನವರ್‌ಗೆ ಸೇರಿದ 427.16 ಕೋಟಿ ರೂ. ಆಸ್ತಿ ಇಡಿ ಜಪ್ತಿ!
ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ‘ಶಿವಂ ಸ್ಕಾಮ್’ (Shivam Scam) ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖಾ ಅಸ್ತ್ರವನ್ನು ಮತ್ತಷ್ಟು ಚುರುಕುಗೊಳಿಸಿದೆ. ಸಾರ್ವಜನಿಕರಿಗೆ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ನಂಬಿಕೆ ದ್ರೋಹ ಎಸಗಿದ್ದ ಬೃಹತ್ ದಂಧೆಯ ಪ್ರಮುಖ ರೂವಾರಿ ಶಿವಾನಂದ ಸಿದ್ಧಪ್ಪ ನೀಲಣ್ಣನವರ್ ಹಾಗೂ ಆತನ ಸಹಚರರಿಗೆ ಇಡಿ ಬಿಗ್ ಶಾಕ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 427.16 ಕೋಟಿ ರೂಪಾಯಿ ಮೌಲ್ಯದ ಚರ…
