Crime: ಶಿಕಾರಿಪುರದಲ್ಲಿ ಬಯಲಾಯ್ತು ಒಂದು ವರ್ಷದ ಹಿಂದಿನ ಕರಾಳ ರಹಸ್ಯ
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದಲ್ಲಿ ವರ್ಷದ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಕ್ತ ಹೆಪ್ಪುಗಟ್ಟಿಸುವ ಸತ್ಯವೊಂದು ಪೊಲೀಸರ (Crime) ತನಿಖೆಯಿಂದ ಹೊರಬಿದ್ದಿದೆ. ತಂಗಿದ್ದ ಪಿಜಿಯಲ್ಲೇ (PG) ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿಯ ಶವವನ್ನು, ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಭೀತಿಯಿಂದ ದೊಡ್ಡ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಪ್ರಪಾತಕ್ಕೆ ಎಸೆದು ಬಂದಿದ್ದ ಕೃತ್ಯ ಒಂದು ವರ್ಷದ ಬಳಿಕ ಅನಾವರಣಗೊಂಡಿದೆ. ಸಾಕ್ಷಿ ನಾಶ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಇಟ್ಟಿಗೆಹಳ್ಳಿಯ ಮುದ್ದನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ…
