Ramayana: ದೀಪಾವಳಿಗೆ ‘ರಾಮಾಯಣ’ ಧಮಾಕಾ: ಅಧಿಕೃತ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಗೆ ಪೇಡ್ ಪ್ರಿವ್ಯೂ ಶೋ!
ಬೆಂಗಳೂರು: ಚಿತ್ರಪ್ರೇಮಿಗಳು ಅತ್ಯಂತ ಕುತೂಹಲ ಹಾಗೂ ಅಪಾರ ನಿರೀಕ್ಷೆಯಿಂದ ಕಾಯುತ್ತಿರುವ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ ಭಾಗ-1’ (Ramayana) ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ತಂದಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಧಿಕೃತವಾಗಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿರುವ ಈ ಬಹುಕೋಟಿ ವೆಚ್ಚದ ಪೌರಾಣಿಕ ಚಿತ್ರವು, ತನ್ನ ಅಧಿಕೃತ ಬಿಡುಗಡೆಯ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿಯೇ ಪ್ರೇಕ್ಷಕರ ಮುಂದೆ ಬರಲಿದೆ. ಅಂದರೆ, ಚಿತ್ರತಂಡವು ವಿಶೇಷ ‘ಪೇಡ್ ಪ್ರಿವ್ಯೂ’ (Paid Previews) ಶೋಗಳನ್ನು ಆಯೋಜಿಸಲು ಯೋಜನೆ…
