POK: ಅವರೂ ನಮಗೆ ಭಾರತದಂತೆಯೇ ಶತ್ರುಗಳು’: ಪಾಕ್ ಆಕ್ರಮಿತ ಕಾಶ್ಮೀರದ 32 ಪ್ರತಿಭಟನಾಕಾರರ ಹತ್ಯೆಯನ್ನು ಸಮರ್ಥಿಸಿಕೊಂಡ ಖವಾಜಾ ಆಸಿಫ್
ಪಾಕಿಸ್ತಾನ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ರಕ್ಷಣಾ ಪಡೆಗಳು ನಡೆಸಿದ ಭೀಕರ ಗುಂಡಿನ ದಾಳಿಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಮರ್ಥಿಸಿಕೊಂಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ. ಪಿಒಕೆಯ ಪ್ರತಿಭಟನಾಕಾರರನ್ನು ತಾವು “ಭಾರತದಂತೆಯೇ ದೇಶದ ಶತ್ರುಗಳು” ಎಂದು ಪರಿಗಣಿಸುವುದಾಗಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 32 ಕಾಶ್ಮೀರಿ ಪ್ರತಿಭಟನಾಕಾರರು ಸಾವುಪಿಒಕೆಯ ರಾವಲಾಕೋಟ್ ಮತ್ತು ಮೀರ್‌ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಸರಣಿ…
