Mysuru Silk: ಮೈಸೂರಿನ ರೇಷ್ಮೆ ಸೀರೆ ಉತ್ಪಾದನಾ ಘಟಕವನ್ನು ಮುಚ್ಚುವುದಿಲ್ಲ: ಕೆ ವೆಂಕಟೇಶ್
ಬೆಂಗಳೂರು: ಮೈಸೂರಿನ ರೇಷ್ಮೆ ಸೀರೆ ಉತ್ಪಾದನಾ (Mysuru Silk) ಘಟಕವನ್ನು ಮುಚ್ಚುವುದಿಲ್ಲ ಎಂದು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ. ಶಾಸಕ ಟಿ.ಎಸ್. ಶ್ರೀವತ್ಸ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲ ಅಧಿಕಾರಿಗಳು ರೇಷ್ಮೆ ಸೀರೆ ಉತ್ಪಾದನಾ ಘಟಕದ ಬಗ್ಗೆ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ, ರೇಷ್ಮೆ ಘಟಕದ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಮನವಿ ಮಾಡಿದ್ದರು. ತಪ್ಪನ್ನು ಸರಿಪಡಿಸಲಾಗಿದ್ದು, ಘಟಕ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಆತಂಕ ಬೇಡ ಎಂದು ಹೇಳಿದರು. ದಿನಕ್ಕೆ 400 ಸೀರೆಗಳ ಉತ್ಪಾದನೆ ಈ…
