Monsoon Health: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಟಿಪ್ಸ್ ಫಾಲೋ ಮಾಡಿ
ಬೇಸಿಗೆಯ ಕಡು ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ಮಳೆಗಾಲವು ತಂಪಾದ ಅನುಭವ ಮತ್ತು ಸಂತೋಷವನ್ನು ತರುತ್ತದೆ. ಮಕ್ಕಳು ಹಾಗೂ ಹಿರಿಯರು ಎಲ್ಲರೂ ಮುಂಗಾರಿನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಆದರೆ, ಈ ಸುಂದರ ಹವಾಮಾನದ ಜೊತೆಗೆ ವೈರಸ್ ಮತ್ತು ವಿವಿಧ ರೀತಿಯ ಸೋಂಕುಗಳ ಅಪಾಯವೂ ಅಷ್ಟೇ ಹೆಚ್ಚಾಗಿರುತ್ತದೆ. ಫೋರ್ಟಿಸ್ ಆಸ್ಪತ್ರೆಯ ಆರೋಗ್ಯ ತಜ್ಞರ ಪ್ರಕಾರ, ಮಳೆಗಾಲದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕೊಂಚ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ಜ್ವರ, ಫ್ಲೂ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹಾಗೂ ಮುಖ್ಯವಾಗಿ ನೀರಿನಿಂದ ಹರಡುವ…
