Sandalwood: ಶಿವಣ್ಣ ಚಿತ್ರದಲ್ಲಿದ್ದದ್ದೇ ನಮಗೆ ಪ್ಲಸ್ ಪಾಯಿಂಟ್: ಪೆದ್ದಿ ಸಿನಿಮಾದ ಹ್ಯಾಟ್ರಿಕ್ ಹೀರೊ ನಟನೆಯನ್ನು ಕೊಂಡಾಡಿದ ಚಿರಂಜೀವಿ!
ಬೆಂಗಳೂರು: ಕನ್ನಡ ಚಿತ್ರರಂಗದ ದೊಡ್ಮನೆಯ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ (Sandalwood) ಅವರಿಗೆ ಸ್ಯಾಂಡಲ್‌ವುಡ್ ದಾಟಿ ಇಡೀ ಸೌತ್ ಸಿನಿಮಾರಂಗದಲ್ಲೂ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮ ಮೇರು ವ್ಯಕ್ತಿತ್ವದಿಂದಲೇ ಪರಭಾಷೆಯ ಚಿತ್ರರಂಗಗಳ ಪ್ರೀತಿ ಸಂಪಾದಿಸಿರುವ ಶಿವಣ್ಣ ಅವರಿಗೆ ತೆಲುಗು ಹಾಗೂ ತಮಿಳಿನಿಂದ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ರಾಮ್ ಚರಣ್ ಪ್ರಮುಖ ಭೂಮಿಕೆಯಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪೆದ್ದಿ’ ಸಿನಿಮಾದಲ್ಲಿ…
