Manipur: ಮತ್ತೆ ಮಣಿಪುರದಲ್ಲಿ ಹಿಂಸಾಚಾರ, ಉಗ್ರರ ದಾಳಿಗೆ ಮೂವರು ಬಲಿ
ಇಂಫಾಲ್: ಕಳೆದ ಕೆಲ ದಿನಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಮಣಿಪುರದಲ್ಲಿ (Manipur) ಬುಧವಾರ ಮತ್ತೊಂದು ಘೋರ ಘಟನೆ ನಡೆದಿದೆ. ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಕುಕಿ ಸಮುದಾಯದ ಮೂವರು ಪ್ರಮುಖ ಧರ್ಮಗುರುಗಳು ಬಲಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕೃತ್ಯವು ರಾಜ್ಯದಲ್ಲಿ ಮತ್ತೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಹೊಂಚುದಾಳಿ ನಡೆಸಿದ ದುಷ್ಕರ್ಮಿಗಳು ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ (TBA) ತಂಡವು ಚುರಚಂದ್‌ಪುರದಲ್ಲಿ ಶಾಂತಿ ಮಾತುಕತೆ ಮುಗಿಸಿ ವಾಹನದಲ್ಲಿ ಮರಳುತ್ತಿತ್ತು. ಈ ವೇಳೆ ಕೋಟ್ಜಿಮ್ ಮತ್ತು ಕೋಟ್ಲೆನ್ ಗ್ರಾಮಗಳ…
