Jana Nayagan: ಜನನಾಯಗನ್ ರಿಲೀಸ್ ಯಾವಾಗ? ನಿರ್ಮಾಪಕರು ಹೇಳಿದ್ದೇನು?
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನಟನೆಯ, ಪ್ರೇಕ್ಷಕರು ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿರುವ ಅವರ ಕೊನೆಯ ಚಿತ್ರ ‘ಜನನಾಯಗನ್’ (Jana Nayagan) ಸಿನಿಮಾದ ಬಿಡುಗಡೆ ಇನ್ನು ಕೂಡ ಅನಿಶ್ಚಿತತೆಯಲ್ಲೇ ಮುಂದುವರಿದಿದೆ. ಹಲವು ತಿಂಗಳುಗಳಿಂದ ವಿಳಂಬವಾಗುತ್ತಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಇನ್ನು ಕೂಡ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ ಎಂಬುದನ್ನು ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ನಿರ್ದೇಶಕ ಎಚ್. ವಿನೋತ್ ಸಾರಥ್ಯದ ಈ ರಾಜಕೀಯ ಆಕ್ಷನ್ ಡ್ರಾಮಾ…
