Crime: ಸಚಿವ ಕೆ.ಜೆ. ಜಾರ್ಜ್ ಒಡೆತನದ ಕಾಫಿ ತೋಟಕ್ಕೆ ನುಗ್ಗಿದ ಸಶಸ್ತ್ರಧಾರಿಗಳು
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಸಚಿವರೊಬ್ಬರ ತೋಟಕ್ಕೆ ಸಶಸ್ತ್ರಧಾರಿಗಳು ನುಗ್ಗಿರುವ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸೇರಿದ ಕಾಫಿ ಎಸ್ಟೇಟ್‌ನೊಳಗೆ ತಡರಾತ್ರಿ ನಾಲ್ವರು ಅನಾಮಧೇಯ ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ (Crime) ಓಡಾಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ಬೆಟ್ಟದ ತಪ್ಪಲಿನ ಆಸುಪಾಸಿನಲ್ಲಿರುವ, ಸಚಿವ ಕೆ.ಜೆ. ಜಾರ್ಜ್ ಅವರ ಮಾಲೀಕತ್ವದ ‘ಏಳುನೂರುಖಾನ್’ ಕಾಫಿ ಎಸ್ಟೇಟ್‌ನಲ್ಲಿ ಈ ಗಂಭೀರ ಕೃತ್ಯ ನಡೆದಿದೆ. ಕೈಯಲ್ಲಿ ಗನ್, ಲಾಂಗ್…
