Janhvi Kapoor: ನಟಿ ಜಾನ್ವಿ ಕಪೂರ್ ಖಾಸಗಿ ಚಾಟ್ ವೈರಲ್: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರೀಕರಣದ ವೇಳೆ ತಕರಾರು?
ಹೈದರಾಬಾದ್: ಗ್ಲಾಮರಸ್ ನಟಿ ಜಾನ್ವಿ ಕಪೂರ್ (Janhvi Kapoor) ಅವರದ್ದೆನ್ನಲಾದ ಕೆಲವು ಖಾಸಗಿ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹೊಸ ವಿವಾದಕ್ಕೆ ಕಾರಣವಾಗಿವೆ. ಸ್ಟಾರ್ ನಟ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ‘ಪೆದ್ದಿ’ ಚಿತ್ರೀಕರಣದ ವೇಳೆ ನಡೆದಿದೆ ಎನ್ನಲಾದ ಕೆಲವು ಆಘಾತಕಾರಿ ವಿಷಯಗಳು ಈ ಲೀಕ್ಡ್ ಚಾಟ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಅಸಮಾಧಾನ ವ್ಯಕ್ತಪಡಿಸಿದ್ದ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಅಕೌಂಟ್‌ಗಳಿಂದ ಹರಿದಾಡುತ್ತಿರುವ…
