Big News: ಅಂತಾರಾಷ್ಟ್ರೀಯ ಜಲಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನೌಕಾಪಡೆ ನೌಕೆಗಳ ನಡುವೆ ಡಿಕ್ಕಿ: ಪಾಕ್ ರಾಯಭಾರಿಗೆ ಸಮನ್ಸ್
ನವದೆಹಲಿ: ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನದ ನೌಕಾಪಡೆಯ ನೌಕೆಯ ನಡುವೆ ಭೀಕರ ಡಿಕ್ಕಿ ಸಂಭವಿಸಿದ್ದು, ಈ ಘಟನೆಯು ಉಭಯ ದೇಶಗಳ ನಡುವೆ (Big News) ಹೊಸ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನಿ ನೌಕಾಪಡೆ ನೌಕೆಯು ಅತ್ಯಂತ ಅಜಾಗರೂಕತೆ ಹಾಗೂ ಜವಾಬ್ದಾರಿರಹಿತ ರೀತಿಯಲ್ಲಿ ಸಂಚರಿಸಿ ಭಾರತೀಯ ಯುದ್ಧನೌಕೆಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಚಾರ್ಜ್ ಡಿ ಅಫೇರ್ಸ್ ಸಾದ್ ಅಹಮದ್ ವಾರೈಚ್ ಅವರಿಗೆ ತುರ್ತು ಸಮನ್ಸ್…
