I-PAC: ಹಣ ಅಕ್ರಮ ವರ್ಗಾವಣೆ ಪ್ರಕರಣ: ಐ-ಪ್ಯಾಕ್ ನಿರ್ದೇಶಕ ವಿನೇಶ್ ಚಂದೇಲ್‌ಗೆ ಜಾಮೀನು
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಮನಿ ಲಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ಪ್ರಕರಣದಲ್ಲಿ ಬಂಧಿತರಾಗಿದ್ದ ಐ-ಪ್ಯಾಕ್ (I-PAC) ಸಂಸ್ಥೆಯ ನಿರ್ದೇಶಕ ವಿನೇಶ್ ಚಂದೇಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯವು (ಇಡಿ) ಈ ಬಾರಿ ಚಂದೇಲ್ ಅವರ ಜಾಮೀನು ಅರ್ಜಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಕಾರಣ ಪಟಿಯಾಲ ಹೌಸ್ ನ್ಯಾಯಾಲಯವು ಈ ರಿಲೀಫ್ ನೀಡಿದೆ. ಜಾಮೀನಿಗೆ ಒಪ್ಪಿಗೆ ನೀಡಿದ ತನಿಖಾ ಸಂಸ್ಥೆ ಗಮನಾರ್ಹವೆಂದರೆ, ಕಳೆದ ಮಂಗಳವಾರವಷ್ಟೇ ನ್ಯಾಯಾಲಯವು…
