TOP NEWS
JDS launches 4 drought study teams to open governments eyes HD Kumaraswamy slams AC room officials

JDS: ಅಧಿಕಾರಿಗಳು ಎಸಿ ರೂಂನಲ್ಲೇ ಕೂತಿದ್ದಾರೆ, ಸರ್ಕಾರದ ಕಣ್ಣು ತೆರೆಸಲು ಜೆಡಿಎಸ್‌ನಿಂದ 4 ಬರ ಅಧ್ಯಯನ ತಂಡಗಳ ರಚನೆ

ಬೆಂಗಳೂರು: “ರಾಜ್ಯದ ಉನ್ನತ ಅಧಿಕಾರಿಗಳು ಹವಾನಿಯಂತ್ರಿತ (AC) ಕೊಠಡಿಗಳನ್ನು ಬಿಟ್ಟು ಹೊರಬರುತ್ತಿಲ್ಲ. ಅವರು ಬರಗಾಲದ ನಿಜವಾದ ಚಿತ್ರಣವನ್ನು ಮುಚ್ಚಿಡುತ್ತಿದ್ದಾರೆ. ಹೀಗಾಗಿ, ಹಳ್ಳಿಗಳಲ್ಲಿ ಸಂಕಷ್ಟದಲ್ಲಿರುವ ಅನ್ನದಾತನ ವಾಸ್ತವ ಸ್ಥಿತಿಯನ್ನು ಅರಿತು, ನಿದ್ದೆ ಮಾಡುತ್ತಿರುವ ಸರ್ಕಾರದ ಕಣ್ಣು ತೆರೆಸಲು ಜೆಡಿಎಸ್ (JDS) ವತಿಯಿಂದ 4 ಪ್ರತ್ಯೇಕ ಬರ ಮತ್ತು ನೆರೆ ಅಧ್ಯಯನ ಸಮಿತಿಗಳನ್ನು ರಚಿಸಲಾಗಿದೆ” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಜೆ.ಪಿ. ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಜುಲೈ 15ರಿಂದಲೇ ಪಕ್ಷದ ಹಿರಿಯ ನಾಯಕರು…

Read Full News
HD Kumaraswamy slams CM alleges voter list manipulation conspiracy in closed door review meetings

HD Kumaraswamy: ಜನರ ಕಿವಿಗೆ ಹೂ ಇಡಲು ಸಿಎಂ ಹೊರಟಿದ್ದಾರೆ; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಮುಖ್ಯಮಂತ್ರಿಗಳ ದೈನಂದಿನ ನಡವಳಿಕೆಗಳ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಭಾರಿ ವಾಗ್ದಾಳಿ ನಡೆಸಿದ್ದಾರೆ. “ಹಿಂದೆ ಕಿವಿಗೆ ಹೂ ಮುಡಿದುಕೊಂಡು ವಿಧಾನಸಭೆಗೆ ಬಂದು ಹೋರಾಟದ ನಾಟಕವಾಡಿದ್ದ ಇದೇ ನಾಯಕರು, ಈಗ ಇಡೀ ಕರ್ನಾಟಕದ ಏಳು ಕೋಟಿ ಜನಸಾಮಾನ್ಯರ ಕಿವಿಗೆ ಹೂ ಇಡಲು ಹೊರಟಿದ್ದಾರೆ” ಎಂದು ಅವರು ಲೇವಡಿ ಮಾಡಿದ್ದಾರೆ. ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಜಂಟಿ…

Read Full News
No room for real estate mafia on HMT land Minister Eshwar Khandre hits back at HD Kumaraswamy

Eshwar Khandre: ಎಚ್‌ಎಂಟಿ ಜಮೀನು ಕನ್ನಡಿಗರ ಆಸ್ತಿ, ಹೆಚ್‌ಡಿಕೆ ಆರೋಪಕ್ಕೆ ಅರ್ಥವಿಲ್ಲ: ಸಚಿವ ಈಶ್ವರ ಖಂಡ್ರೆ ತಿರುಗೇಟು

ಬೀದರ್: ಬೆಂಗಳೂರಿನಲ್ಲಿರುವ ಎಚ್.ಎಂ.ಟಿ. (HMT) ವಶದ ಅರಣ್ಯ ಭೂಮಿಯನ್ನು ಅಕ್ರಮವಾಗಿ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಲಾಗಿದೆ. ಈಗ ಕೋರ್ಟ್ ಆದೇಶದಂತೆ ಅರಣ್ಯ ಭೂಮಿ ತೆರವು ಮಾಡಲಾಗುತ್ತಿದ್ದು, ಇಲ್ಲಿ ಯಾವುದೇ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಿಲ್ಲ. ಹೀಗಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳು ಆಧಾರರಹಿತ ಎಂದು ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ (Eshwar Khandre) ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಪರಿವರ್ತನೆ ಆಗದ ಈ ಜಮೀನನ್ನು…

Read Full News
You Are Being Sacrificed for Politics Protect Your Own Livelihood CM DK Shivakumar Appeal to Farmers

DK Shivakumar: ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಕುಮಾರಸ್ವಾಮಿ ಟೀಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ಆರೋಪ ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಈ ಅಕ್ರಮದ ಹಿಂದೆ ಸರ್ಕಾರದ ಕೈವಾಡವಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದುವರಿಸುವುದು ಅಥವಾ ರದ್ದುಗೊಳಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯೇ ಹೊರತು ಸರ್ಕಾರದ ಕೆಲಸವಲ್ಲ ಎಂದಿರುವ ಅವರು,…

Read Full News
Voter List Controversy BK Hariprasad Mocks Kumaraswamy Calls Him BJPs Sacrificial Lamb

BK Hariprasad: ಬಿಜೆಪಿಯ ದಾಳವಾಗಿ ಕುಮಾರಸ್ವಾಮಿ ಹರಕೆಯ ಕುರಿ: ಬಿ.ಕೆ. ಹರಿಪ್ರಸಾದ್ ತೀಕ್ಷ್ಣ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಮೆಟ್ಟಿಲೇರಲು ಸಜ್ಜಾಗಿರುವ ವಿರೋಧ ಪಕ್ಷಗಳ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, (BK Hariprasad) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆಗೂಡಿ ದೂರು ನೀಡಲು ಮುಂದಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ಹಿಂದೆ…

Read Full News
HD Kumaraswamy Alleges Massive SIR Irregularities in Yeshwanthpur Assembly Segment

HD Kumaraswamy: ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ SIR ಅಕ್ರಮ; ಹೆಚ್.ಡಿ.ಕುಮಾರಸ್ವಾಮಿ ಆರೋಪ

ಬೆಂಗಳೂರು: ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ರಾಜ್ಯ ಸರಕಾರ ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ನೇರ ಆರೋಪ ಮಾಡಿದರು. ಸಿಎಂ ವಿರುದ್ಧ ವಾಗ್ದಾಳಿ ಅಲ್ಲದೆ, ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದ ಸಚಿವರು; ಈ ಬಗ್ಗೆ ಕೇಂದ್ರ ಚುನಾವಣಾ…

Read Full News
congress MLA HC balakrishna open challenge to HD kumaraswamy come and promise in dharmasthala temple

Bidadi Township: ಬಿಡದಿ ಸ್ಮಾರ್ಟ್ ಟೌನ್‌ಶಿಪ್ ವಿವಾದಕ್ಕೆ ಆಣೆ-ಪ್ರಮಾಣದ ಟ್ವಿಸ್ಟ್: ಕುಮಾರಸ್ವಾಮಿಗೆ ಧರ್ಮಸ್ಥಳ ಸವಾಲು ಹಾಕಿದ ಶಾಸಕ ಎಚ್.ಸಿ. ಬಾಲಕೃಷ್ಣ!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಸ್ಮಾರ್ಟ್ ಟೌನ್‌ಶಿಪ್ (Bidadi Township) ಯೋಜನೆಯ ಸುತ್ತಲಿನ ರಾಜಕೀಯ ಜಿದ್ದಾಜಿದ್ದಿ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಪತ್ರ ಸಮರ ಮತ್ತು ಸವಾಲುಗಳ ಬೆನ್ನಲ್ಲೇ, ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೆಡಿಎಸ್ ನಾಯಕನಿಗೆ ಹೊಸ ಸವಾಲೊಂದನ್ನು ಎಸೆದಿದ್ದಾರೆ. ಬಿಡದಿ ಟೌನ್‌ಶಿಪ್ ನಿಮ್ಮದೇ ಕನಸಿನ ಕೂಸು ಹೌದೋ ಅಲ್ವೋ ಎಂಬುದನ್ನು ಧರ್ಮಸ್ಥಳದ ಮಂಜುನಾಥ…

Read Full News