Hassanamba Utsava: ಹಾಸನಾಂಬೆ ದರ್ಶನೋತ್ಸವಕ್ಕೆ ಧಾರ್ಮಿಕ ಚಾಲನೆ: ಕಣ್ಮನ ಸೆಳೆಯುವ ಅದ್ಧೂರಿ ಪುಷ್ಪಾಲಂಕಾರ!
ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬೆ ದೇವಿ (Hassanamba Utsava) ದರ್ಶನೋತ್ಸವ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಿದೆ. ಈ ಮಹತ್ವದ ಉತ್ಸವಕ್ಕಾಗಿ ದೇವಾಲಯದ ಆವರಣವನ್ನು ವಿವಿಧ ಮಾದರಿಯ ರಂಗುರಂಗಿನ ವಿಶೇಷ ಹೂವುಗಳಿಂದ ಅತ್ಯಂತ ಅದ್ಧೂರಿಯಾಗಿ ಅಲಂಕರಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ತಿರುಪತಿ ತಿರುಮಲ ದೇವಾಲಯದ ಮಾದರಿಯಲ್ಲಿ ಕಲಾತ್ಮಕವಾಗಿ ಪುಷ್ಪಾಲಂಕಾರ ಮಾಡಲಾಗಿದ್ದು, ಅಕ್ಟೋಬರ್ 29ರ ಮಧ್ಯಾಹ್ನ 12.30ಕ್ಕೆ ಗರ್ಭಗುಡಿಯ ಬಾಗಿಲು ತೆರೆಯುವ ಮೂಲಕ ದರ್ಶನೋತ್ಸವಕ್ಕೆ ವಿಧ್ಯುಕ್ತ…
