Breaking: ದೇವಸ್ಥಾನದ ಕಾಣಿಕೆ ಬಾಕ್ಸ್‌ನಿಂದ ₹1 ಲಕ್ಷ ಎಗರಿಸಲು ಯತ್ನಿಸಿದ ಸಿಬ್ಬಂದಿ: ಮೂವರ ಬಂಧನ, ವಿಡಿಯೋ ವೈರಲ್
ಗಾಂಧಿನಗರ: ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಉತ್ತರಾಖಂಡದ ಬದರಿನಾಥ ದೇವಸ್ಥಾನಗಳಲ್ಲಿ ಭಕ್ತರ ಕಾಣಿಕೆ ದುರುಪಯೋಗದ ಆರೋಪಗಳ ಬೆನ್ನಲ್ಲೇ, ಈಗ ಗುಜರಾತ್‌ನ ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲೂ ಇಂತಹದ್ದೇ ಒಂದು ಕಳ್ಳತನದ ಪ್ರಕರಣ (Breaking) ಬೆಳಕಿಗೆ ಬಂದಿದೆ. ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಿಂದ ಹಣ ಕಳ್ಳತನ ಮಾಡುತ್ತಿರುವ ಹಳೆಯ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಭಕ್ತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಏನಿದೆ ವೈರಲ್ ವಿಡಿಯೋದಲ್ಲಿ? ವೈರಲ್ ಆಗಿರುವ ವಿಡಿಯೋ ಪ್ರಕಾರ, ದೇವಸ್ಥಾನದ ಕಾಣಿಕೆ ಹಣ ಎಣಿಕೆ ಮಾಡುವ ಕೊಠಡಿಯಿಂದ…
