Protest: ಪ್ರತಿ ಟನ್ ಕಬ್ಬಿಗೆ 4,300 ರೂ. ದರ ನಿಗದಿಗೆ ಪಟ್ಟು: ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ ಎಚ್ಚರಿಕೆ
ಬೆಳಗಾವಿ: ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Protest) ಆರಂಭವಾಗಲಿರುವ 10 ದಿನಗಳ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಈ ಬಾರಿ ರೈತರ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಬರ ಪರಿಹಾರ ಸೇರಿದಂತೆ ಕೃಷಿ ವಲಯದ ಹಲವು ಪ್ರಮುಖ ಬೇಡಿಕೆಗಳು ಈಡೇರದ ಕಾರಣ, ಕಬ್ಬು ಬೆಳೆಗಾರರು ಮತ್ತು ವಿವಿಧ ರೈತ ಸಂಘಟನೆಗಳು ಬೃಹತ್ ಹೋರಾಟ ನಡೆಸಲು ಸಜ್ಜಾಗಿವೆ. ಮಹಾರಾಷ್ಟ್ರ ಮಾದರಿಯಲ್ಲಿ 4,300 ರೂ. ದರಕ್ಕೆ ಪಟ್ಟು ಉತ್ತರ ಕರ್ನಾಟಕದ…
