FIFA World Cup: ರೋಚಕ ಪಂದ್ಯದಲ್ಲಿ ಅರ್ಜೆಂಟೀನಾಗೆ ಒಲಿದ ಜಯ; ‘ಫೇರ್ ಪ್ಲೇ’ ಉಲ್ಲಂಘನೆಯಾಗಿದೆ ಎಂದು ಗುಡುಗಿದ ಈಜಿಪ್ಟ್ ತರಬೇತುದಾರ!
ಈಜಿಪ್ಟ್: ಫಿಫಾ ವಿಶ್ವಕಪ್‌ನ (FIFA World Cup) ಜಾಗತಿಕ ವೇದಿಕೆಯನ್ನು ಬಳಸಿಕೊಂಡಿರುವ ಈಜಿಪ್ಟ್ ಫುಟ್‌ಬಾಲ್ ತಂಡದ ಮುಖ್ಯ ತರಬೇತುದಾರ್ ಹೊಸಾಮ್ ಹಸನ್, ಗಜಾದಲ್ಲಿ ಪ್ಯಾಲೇಸ್ಟಿನಿಯನ್ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಪ್ಯಾಲೇಸ್ಟಿನಿಯನ್ನರ ಸಂಕಷ್ಟವನ್ನು “ವಿಶ್ವಕ್ಕೇ ನಾಚಿಕೆಗೇಡು” ಎಂದು ಬಣ್ಣಿಸಿರುವ ಅವರು, ಅವರ ಧ್ವನಿಯಾಗಲು ಫುಟ್‌ಬಾಲ್ ಸಂಸ್ಥೆಗಳು, ಕ್ರೀಡಾಪಟುಗಳು ಮತ್ತು ಮಾಧ್ಯಮಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಟ್ಲಾಂಟಾದಲ್ಲಿ ಅರ್ಜೆಂಟೀನಾ ವಿರುದ್ಧ ನಡೆಯಲಿರುವ ಈಜಿಪ್ಟ್‌ನ ಪ್ರಮುಖ ಪಂದ್ಯಕ್ಕೂ ಮುನ್ನ ನಡೆದ…
