KPTCL: ಸೈಬರ್ ದಾಳಿಗೆ ಬ್ರೇಕ್: ಅತ್ಯಾಧುನಿಕ ‘ಝೀರೋ ಟ್ರಸ್ಟ್’ ತಂತ್ರಜ್ಞಾನ ಅಳವಡಿಸಿಕೊಂಡ ದೇಶದ ಮೊದಲ ವಿದ್ಯುತ್ ನಿಗಮ ಎಂಬ ಕೀರ್ತಿಗೆ ಕೆಪಿಟಿಸಿಎಲ್ ಭಾಜನ!
ಬೆಂಗಳೂರು: ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಡಿಜಿಟಲ್ ಭದ್ರತೆಗೆ ಕೋಟೆ ಕಟ್ಟಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಸುರಕ್ಷಿತ ಎನಿಸಿಕೊಂಡಿರುವ ‘ಝೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್’ ತಂತ್ರಜ್ಞಾನವನ್ನು ನಿಗಮವು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಈ ಮೂಲಕ ಇಂತಹ ಹೈಟೆಕ್ ಸೈಬರ್ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊಟ್ಟಮೊದಲ ಇಂಧನ ಪ್ರಸರಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಕೆಪಿಟಿಸಿಎಲ್ ತನ್ನದಾಗಿಸಿಕೊಂಡಿದೆ. ಡಿಜಿಟಲ್ ಜಾಲಕ್ಕೆ ಹೈಟೆಕ್ ರಕ್ಷಣೆ: ನಿಗಮದ ಇಂಜಿನಿಯರಿಂಗ್, ಕಾರ್ಯಾಚರಣೆ,…
