Wipro: ಐಟಿ ವಲಯದಲ್ಲಿ ತಲ್ಲಣ: ವಿಪ್ರೋ ಮಾಜಿ ಉದ್ಯೋಗಿಗೆ ಮತಾಂತರಕ್ಕೆ ಒತ್ತಡ ಹಾಗೂ ಕಿರುಕುಳ ಆರೋಪ,
ಪುಣೆ: ಇತ್ತೀಚೆಗಷ್ಟೇ ನಾಸಿಕ್‌ನ ಟಿಸಿಎಸ್ ಸಂಸ್ಥೆ ಹಾಗೂ ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದ್ದ ವಿವಾದಾತ್ಮಕ ಘಟನೆಗಳ ಬೆನ್ನಲ್ಲೇ, ಇದೀಗ ಮಹಾರಾಷ್ಟ್ರದ ಪುಣೆಯಲ್ಲಿರುವ ಪ್ರಖ್ಯಾತ ಐಟಿ ಸಂಸ್ಥೆ ‘ವಿಪ್ರೋ’ (Wipro) ನಿಂದ ಅತ್ಯಂತ ಗಂಭೀರ ಮಾದರಿಯ ಧಾರ್ಮಿಕ ಕಿರುಕುಳ ಮತ್ತು ಕಾರ್ಪೊರೇಟ್ ತಾರತಮ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಪುಣೆಯ ಹಿಂಜವಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಸಂತ್ರಸ್ತ ಹಿಂದೂ ಯುವತಿಯು ಹಿಂದೂ ಜನಜಾಗೃತಿ ಸಮಿತಿ (HJS) ಆಯೋಜಿಸಿದ್ದ ಜಂಟಿ…
