Rashmika Mandanna: ಕೊಡಗಿನಲ್ಲಿ ರಶ್ಮಿಕಾ-ವಿಜಯ್ ಹನಿಮೂನ್
ಮಡಿಕೇರಿ: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ತವರು ಜಿಲ್ಲೆ ಕೊಡಗಿನಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹವಾದ ನಂತರ ರಶ್ಮಿಕಾ ಅವರು ಕೊಡಗಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮದುವೆಯ ನಂತರ ಕೊಡವ ಸಂಪ್ರದಾಯದಂತೆ ಹಮ್ಮಿಕೊಂಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ಸಾಂಪ್ರದಾಯಿಕ ಕೊಡವ ಸೀರೆಯನ್ನು ಉಟ್ಟು ಮಿಂಚುವ ಮೂಲಕ ತಮ್ಮ ಮೂಲ…
