Cooker Bomb Case: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ; ಶಿಕ್ಷೆ ಸಾಕಾಗದು ಎಂದ ಸಂತ್ರಸ್ತ ಆಟೋ ಚಾಲಕ
ಮಂಗಳೂರು: 2022ರ ನವೆಂಬರ್ 19ರಂದು ನಡೆದಿದ್ದ ಬಹುಚರ್ಚಿತ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Cooker Bomb Case) ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ, ಈ ಶಿಕ್ಷೆಯ ಪ್ರಮಾಣ ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವಾವಾಧಿ ಶಿಕ್ಷೆ ಆಗಬೇಕಿತ್ತು ಅಪರಾಧಿಗೆ ಶಿಕ್ಷೆಯಾಗಿರುವುದು ಒಳ್ಳೆಯದೇ ಆದರೂ, ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಲು…
