TOP NEWS
Shocking bomb threat e mails to 4 district courts

Bomb Threat: ಕೋರ್ಟ್‌ಗಳಿಗೆ ಸರಣಿ ಇ-ಮೇಲ್ ಬಾಂಬ್ ಬೆದರಿಕೆ: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೈಡ್ರಾಮಾ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲಾ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ನಡೆಸುತ್ತಿರುವ ಹುಸಿ ಬಾಂಬ್ ಇ-ಮೇಲ್ (‌Bomb Threat) ದಂಧೆ ಸಾರ್ವಜನಿಕ ವಲಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಜೂನ್ 19ರ ಶುಕ್ರವಾರದಂದು ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ದಾವಣಗೆರೆ, ಧಾರವಾಡ ಮತ್ತು ಕೋಲಾರದ ಕೋರ್ಟ್ ಆವರಣಗಳಿಗೆ ಏಕಕಾಲದಲ್ಲಿ ಬೆದರಿಕೆ ಇ-ಮೇಲ್‌ಗಳು ಬಂದಿವೆ. ನ್ಯಾಯಾಲಯಗಳ ಒಳಗೆ ಬಾಂಬ್ ಅಡಗಿಸಿಡಲಾಗಿದೆ ಎಂಬ ಮಾಹಿತಿ ಹರಡುತ್ತಿದ್ದಂತೆ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಂಗ ಸಿಬ್ಬಂದಿ ಪ್ರಾಣಭಯದಿಂದ ಆಚೆ ಓಡಿ ಬಂದಿದ್ದು, ಇಡೀ ಪೊಲೀಸ್…

Read More
fake Bomb threat email to bengaluru RTO office

Bomb Threat: ಬೆಂಗಳೂರಿನ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರು: ರಾಜಧಾನಿಯ ಜನನಿಬಿಡ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಮತ್ತೊಮ್ಮೆ ಬಾಂಬ್ ಆತಂಕ ಸೃಷ್ಟಿಸಿದ್ದಾರೆ. ನಗರದ ಹಲವು ಪ್ರಮುಖ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಇ-ಮೇಲ್ ಮೂಲಕ ಸ್ಫೋಟದ (Bomb Threat) ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಗದ್ದಲ ಮೂಡಿಸಿದೆ. ಜ್ಞಾನಭಾರತಿ, ಕಸ್ತೂರಿನಗರ, ಎಚ್.ಎಸ್.ಆರ್ ಲೇಔಟ್ ಹಾಗೂ ತಲಘಟ್ಟಪುರದ ಆರ್‌ಟಿಒ ಕಚೇರಿಗಳಿಗೆ ಜೂನ್ 16ರ ಮಧ್ಯಾಹ್ನ 1:30ರ ಸುಮಾರಿಗೆ ಏಕಕಾಲದಲ್ಲಿ ಈ ವಿಧ್ವಂಸಕ ಇ-ಮೇಲ್‌ಗಳು ಬಂದಿವೆ. ಕಚೇರಿ ಕಟ್ಟಡಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದಾಗಿ ಸಂದೇಶದಲ್ಲಿ…

Read More