Bengaluru: ಹಫ್ತಾ ವಸೂಲಿ, ಅಧಿಕಾರಿಗಳ ದರ್ಪಕ್ಕೆ ಬೇಸತ್ತ ವರ್ತಕರು: ಜೂನ್ 18 ರಿಂದ ಬೆಂಗಳೂರಿನಲ್ಲಿ ಬೇಕರಿ, ಸಣ್ಣ ಅಂಗಡಿಗಳು ಬಂದ್!
ಬೆಂಗಳೂರು: ರಾಜಧಾನಿಯ ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಬೇಕರಿ ಮಾಲೀಕರು ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪುಡಿ ರೌಡಿಗಳ ಹಾವಳಿ, ಮಾಮೂಲಿಗಾಗಿ ಪೀಡಿಸುವ ದಂಧೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಿರಂತರ ಕಿರುಕುಳಕ್ಕೆ (Bengaluru) ಶಾಶ್ವತ ಪರಿಹಾರ ಕೋರಿ, ನಗರದ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಮತ್ತು ಬೀದಿಬದಿ ವ್ಯಾಪಾರಿಗಳು ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ಬೆಂಗಳೂರು ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, “ನಮಗೆ ನೆಮ್ಮದಿಯಿಂದ ವ್ಯಾಪಾರ…
