Doping Test: ಡೋಪಿಂಗ್ ಸುಳಿಯಲ್ಲಿ ಭಾರತೀಯ ಕ್ರೀಡಾಲೋಕ: ಒಲಿಂಪಿಕ್ ಆತಿಥ್ಯದ ಕನಸಿಗೆ ಎದುರಾಗಿದೆಯೇ ಹಿನ್ನಡೆ?
ನ್ಯೂಯಾರ್ಕ್: ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಡೋಪಿಂಗ್ (Doping Test) ಹಗರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಒಲಿಂಪಿಕ್ ಗೇಮ್ಸ್‌ನ ಉದ್ದೀಪನ ಮದ್ದು ತಡೆ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂತರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA), ಭಾರತದಲ್ಲಿ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಪರೀಕ್ಷೆಯಿಂದ ಓಡಿಹೋಗುತ್ತಿರುವ ಕ್ರೀಡಾಪಟುಗಳು: ಐಟಿಎ ಮಹಾನಿರ್ದೇಶಕ ಬೆಂಜಮಿನ್ ಕೋಹೆನ್ ಅವರು ‘ದಿ ಅಥ್ಲೆಟಿಕ್’ ಪತ್ರಿಕೆಗೆ ನೀಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಉದ್ದೀಪನ ಮದ್ದು ತಡೆ ನಿಯಂತ್ರಣಾಧಿಕಾರಿಗಳು…
