Arjun Sarja: ಮಗಳು ಐಶ್ವರ್ಯಾ ವೈವಾಹಿಕ ಜೀವನದ ವದಂತಿಗಳಿಗೆ ಅರ್ಜುನ್ ಸರ್ಜಾ ಖಡಕ್ ತಿರುಗೇಟು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಆಕ್ಷನ್ ಕಿಂಗ್
ಚೆನ್ನೈ: ಇತ್ತೀಚೆಗಷ್ಟೇ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಅವರ ಕಿರಿಯ ಪುತ್ರಿ ಅಂಜನಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು. ಆದರೆ, ಈ ಸಂಭ್ರಮದ ನಡುವೆ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಅವರ ಪತಿ ಗೈರಾಗಿದ್ದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಐಶ್ವರ್ಯಾ ಅವರ ದಾಂಪತ್ಯ ಜೀವನದ ಕುರಿತು ಹಲವು ಊಹಾಪೋಹಗಳು ಮತ್ತು ವದಂತಿಗಳು ಹರಿದಾಡತೊಡಗಿದ್ದವು. ಈ ಎಲ್ಲಾ ಬೆಳವಣಿಗೆಗಳ ಕುರಿತು ಮೌನ ಮುರಿದಿರುವ ಅರ್ಜುನ್ ಸರ್ಜಾ,…
