ಚೆನ್ನೈ: ಗುರುವಾರ ಚೆನ್ನೈನಲ್ಲಿ ನಡೆಯಲಿರುವ ನಿರ್ಣಾಯಕ ಟಿ20 ವಿಶ್ವಕಪ್ (T20 World Cup) ಸೂಪರ್ 8 ಪಂದ್ಯದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಆಡಲಿದ್ದು, ಹಿಂದಿನ ಸೋಲಿನ ನಂತರ ಇದು ಬಹಳ ಪ್ರಮುಖ ಎನಿಸಿಕೊಂಡಿದೆ.
ಸೆಮಿ ಫೈನಲ್ ಕನಸಿಗೆ ದೊಡ್ಡ ಹೊಡೆತ
ಇನ್ನು ಹಿಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಭಾರೀ ಸೋಲಿನ ನಂತರ ಭಾರತದ ಸೆಮಿಫೈನಲ್ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ವೆಸ್ಟ್ ಇಂಡೀಸ್ ಜಿಂಬಾಬ್ವೆಯನ್ನು ಭಾರಿ ಅಂತರದಿಂದ ಸೋಲಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಇದರ ಪರಿಣಾಮವಾಗಿ ಭಾರತವು ಟಾಪ್ 4 ರಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಎರಡೂ ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲಬೇಕಾಗಿದೆ.
ಪಂದ್ಯಕ್ಕೆ ಅಡ್ಡಿ ಆಗುತ್ತಾ ಮಳೆ?
ಇನ್ನು ಇಂದಿನ ಹವಾಮಾನದ ವಿಚಾರಕ್ಕೆ ಬಂದರೆ, ಚೆನ್ನೈನ ಹವಾಮಾನ ಮುನ್ಸೂಚನೆಯು ಕ್ರಿಕೆಟ್‌ಗೆ ಹೆಚ್ಚಾಗಿ ಅನುಕೂಲಕರವಾಗಿದ್ದು, ಗುರುವಾರ ಮಳೆಯ ಮುನ್ಸೂಚನೆ ಇಲ್ಲ. ತಾಪಮಾನವು 26-28 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಮತ್ತು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ತೇವಾಂಶವು ಶೇಕಡಾ 70 ರಷ್ಟು ಮೀರುವ ನಿರೀಕ್ಷೆಯಿದೆ,
ಇನ್ನು ಈ ಮಧ್ಯೆ, ಕೌಟುಂಬಿಕ ಸಮಸ್ಯೆಯ ಕಾರಣದಿಂದ ಸದ್ಯ ಬ್ರೇಕ್ ಮೇಲೆ ಹೊರಗೆ ಹೋಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೂರ್ಯ ಕುಮಾರ್ ಕ್ಯಾಪ್ಟೆನ್ಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೊಹಮ್ಮದ್ ಕೈಫ್
