Sagara: ಬಡ ರೈತನ ಅಡಿಕೆ ತೋಟಕ್ಕೆ ಕನ್ನ ಹಾಕಿದ ಕೆಪಿಸಿ ಅಧಿಕಾರಿಗಳು!: ಪೂರ್ವಭಾವಿ ನೋಟಿಸ್ ನೀಡದೆ ಬೇಲಿ ತೆರವು
ಸಾಗರ: ಅಧಿಕಾರ ಹಾಗೂ ರಾಜಕೀಯ ಬಲವಿದ್ದವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಎಂಬಂತೆ ಕರ್ನಾಟಕ ಪವರ್ ಕಾರ್ಪೊರೇಷನ್ (KPCL) ಅಧಿಕಾರಿಗಳು ಏಕಪಕ್ಷೀಯವಾಗಿ (Sagara) ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯಾವುದೇ ಪೂರ್ವಭಾವಿ ನೋಟಿಸ್ ಅಥವಾ ಮುನ್ಸೂಚನೆ ನೀಡದೆ, ಬಡ ರೈತನೊಬ್ಬನ ಅಡಿಕೆ ತೋಟದ ಬೇಲಿಯನ್ನು ಕೆಪಿಸಿ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದು, ಸಂತ್ರಸ್ತ ರೈತ ಕುಟುಂಬ ಕಣ್ಣೀರಿಡುವಂತಾಗಿದೆ. 80 ವರ್ಷಗಳಿಂದ ಅದೇ ಜಾಗದಲ್ಲಿ ಇರುವ ಕುಟುಂಬ ಸಂತ್ರಸ್ತ ರೈತ ಗೋವರ್ಧನ ಅರಬಳ್ಳಿ ಅವರು ನೀಡಿರುವ ಮಾಹಿತಿಯ…
