T20 World Cup: ಪಾಕ್‌ನಿಂದ ಮತ್ತೊಂದು ನಾಟಕ, ಐಸಿಸಿಗೆ ಇಮೇಲ್ ಮಾಡದೇ ಆಟ
ನವದೆಹಲಿ: ಪಾಕಿಸ್ತಾನ ಮತ್ತು ಅದರ ಟಿ20 ವಿಶ್ವಕಪ್ (T20 World Cup) ನಾಟಕ ಕೊನೆಯಾಗುತ್ತಿಲ್ಲ. ಭಾನುವಾರ, ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ 2026 ರ ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿತ್ತು, ಆದರೆ ನಂತರ ಮತ್ತೆ ನಾಟಕ ಆರಂಭ ಮಾಡಿದೆ. ಭಾರತದ ಜೊತೆ ಆಡಲ್ಲ ಎಂದ ಪಾಕ್ ಫೆಬ್ರವರಿ 15 ರಂದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ಈಗ, ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಬಗ್ಗೆ ಪಾಕಿಸ್ತಾನ…
