TOP NEWS

Prabhas: ಪ್ರಭಾಸ್ ಫ್ಯಾನ್ಸ್‌ಗೆ ಬಿಗ್ ಅಪ್ಡೇಟ್: ಅಧಿಕೃತವಾಗಿ ಅನೌನ್ಸ್ ಆಯ್ತು ‘ಫೌಜಿ’ ರಿಲೀಸ್ ಡೇಟ್

Mark the Date Prabhas Highly Anticipated Fauzi to Hit Screens on December 3

ಹೈದರಾಬಾದ್:‌ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಭಿಮಾನಿಗಳಿಗೆ ಕೊನೆಗೂ ಒಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ‘ಫೌಜಿ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಈ ಬಹುನಿರೀಕ್ಷಿತ ಚಿತ್ರವು 2026ರ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕದ ಜೊತೆಗೆ ಚಿತ್ರತಂಡ ಒಂದು ಖಡಕ್ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದು, ಇದು ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ನಟ ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಫಸ್ಟ್‌ ಲುಕ್ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ಅವರು ರಕ್ತಸಿಕ್ತವಾಗಿ, ಶರ್ಟ್ ಇಲ್ಲದೆ, ಕೈಯಲ್ಲಿ ಗನ್ ಹಿಡಿದು ಹೆಣಗಳ ಮಧ್ಯೆ ಬಂಡೆಯೊಂದರ ಮೇಲೆ ಕುಳಿತಿರುವ ಭೀಕರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿರುವ “ಒಂಟಿಯಾಗಿ ಹೋರಾಡುವ ಬೆಟಾಲಿಯನ್” ಎಂಬ ಅಡಿಬರಹವು ಸಿನಿಮಾ ಎಷ್ಟು ಆ್ಯಕ್ಷನ್ ಮತ್ತು ಎಮೋಷನ್‌ನಿಂದ ಕೂಡಿರಲಿದೆ ಎಂಬುದರ ಸುಳಿವು ನೀಡುತ್ತದೆ.

ಡಿಸೆಂಬರ್‌ 3ಕ್ಕೆ ಸಿನಿಮಾ ರಿಲೀಸ್

ಈ ಪೋಸ್ಟರ್ ಹಂಚಿಕೊಂಡಿರುವ ಪ್ರಭಾಸ್, “ಅಜ್ಞಾತಪರ್ವ ಕೊನೆಗೊಳ್ಳುತ್ತದೆ. ಡಿಸೆಂಬರ್ 3, 2026ಕ್ಕೆ ಫೌಜಿ ಬರಲಿದ್ದಾನೆ” ಎಂದು ಬರೆದುಕೊಂಡಿದ್ದಾರೆ. ಚಿತ್ರತಂಡ ಕೂಡ “ಅಜ್ಞಾತಪರ್ವ ಮುಗಿಯಿತು, ದಂಗೆ ಆರಂಭ. ಡಿಸೆಂಬರ್ 3ರಂದು ಫೌಜಿ ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್” ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ಸೀತಾ ರಾಮಂ ಖ್ಯಾತಿಯ ಹನು ರಾಘವಪುಡಿ ನಿರ್ದೇಶನದ ಈ ಚಿತ್ರದ ಮೂಲಕ ಪ್ರಭಾಸ್, ಬಾಹುಬಲಿ ಚಿತ್ರದ ನಂತರ ಮತ್ತೆ ಐತಿಹಾಸಿಕ ಹಿನ್ನೆಲೆಯುಳ್ಳ (ಪೀರಿಯಡ್ ಡ್ರಾಮಾ) ಕಥಾಹಂದರಕ್ಕೆ ಮರಳುತ್ತಿದ್ದಾರೆ. ಈ ಸಿನಿಮಾ ಅದ್ಭುತ ದೃಶ್ಯ ವೈಭವ ಹಾಗೂ ಭಾವನಾತ್ಮಕ ಆ್ಯಕ್ಷನ್ ಕಥೆಯೊಂದಿಗೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ಭರವಸೆಯನ್ನು ಮೂಡಿಸಿದೆ.‌

ಕಾತರದಿಂದ ಕಾಯುತ್ತಿದ್ದಾರೆ‌ ಫ್ಯಾನ್ಸ್

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಮತ್ತು ಟಿ-ಸೀರಿಸ್ ಸಂಸ್ಥೆ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ನವೀನ್ ಯೆರ್ನೇನಿ, ವೈ. ರವಿಶಂಕರ್ ಮತ್ತು ಭೂಷಣ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಪುಷ್ಪ ಸಿನಿಮಾದ ನಿರ್ಮಾಪಕರು, ಸೀತಾ ರಾಮಂ ಚಿತ್ರದ ನಿರ್ದೇಶಕರು ಹಾಗೂ ಪ್ರಭಾಸ್ ಅವರ ಈ ಅಪರೂಪದ ಕಾಂಬಿನೇಷನ್ ಕಾರಣಕ್ಕಾಗಿಯೇ ಸಿನಿಮಾ ಘೋಷಣೆಯಾದ ದಿನದಿಂದಲೂ ಭಾರಿ ಹೈಪ್ ಸೃಷ್ಟಿಸಿತ್ತು. ಇದೀಗ ರಿಲೀಸ್ ಡೇಟ್ ಫಿಕ್ಸ್ ಆಗಿರುವುದರಿಂದ, 2026ರ ವರ್ಷಾಂತ್ಯದಲ್ಲಿ ಭಾರತೀಯ ಚಿತ್ರರಂಗದ ಅತಿ ದೊಡ್ಡ ಸಿನಿಮಾಗಳಲ್ಲಿ ಒಂದಾಗಿ ‘ಫೌಜಿ’ ಚಿತ್ರಮಂದಿರಗಳಿಗೆ ಅಪ್ಪಳಿಸಲು ಸಜ್ಜಾಗಿದೆ.

ಇದನ್ನೂ ಓದಿ: ಖಾಕಿ ಉಡುಪಿನಲ್ಲಿ ದಳಪತಿ ವಿಜಯ್ ಖಡಕ್ ಲುಕ್: ಕೊನೆಗೂ ರಿಲೀಸ್ ಡೇಟ್ ಘೋಷಿಸಿದ ‘ಜನನಾಯಗನ್’!

Leave a Reply

Your email address will not be published. Required fields are marked *