ಟೆಹ್ರಾನ್: ಕಳೆದ ಕೆಲವು ದಿನಗಳಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದ್ದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜ್ವಾಲೆ ಸದ್ಯಕ್ಕೆ ತಣ್ಣಗಾಗುವ (Iran War) ಲಕ್ಷಣಗಳು ಕಾಣಿಸುತ್ತಿವೆ. ಬೈರೂತ್ ಹಾಗೂ ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ನೆಲದ ಮೇಲೆ ದೊಡ್ಡ ಪ್ರಮಾಣದ ರಾಕೆಟ್ ದಾಳಿ ನಡೆಸಿದ್ದ ಇರಾನ್, ಇದೀಗ ತನ್ನ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಈ ಮಹತ್ವದ ತೀರ್ಮಾನ ಕೈಗೊಂಡಿರುವುದಾಗಿ ಇರಾನ್ ಮಿಲಿಟರಿಯ ಜಂಟಿ ಕಮಾಂಡ್ ತಿಳಿಸಿದೆ.
ಯುದ್ಧ ನಿಯಂತ್ರಿಸಲು ಡೊನಾಲ್ಡ್ ಟ್ರಂಪ್ ಸಂಧಾನದ ಆಟ
ಈ ಮಹಾ ಬಿಕ್ಕಟ್ಟನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಕ್ರಿಯವಾಗಿ ರಂಗಪ್ರವೇಶ ಮಾಡಿದ್ದಾರೆ. ಇರಾನ್ನ ಇತ್ತೀಚಿನ ಕ್ಷಿಪಣಿ ದಾಳಿಗೆ ತಕ್ಷಣ ಯಾವುದೇ ಪ್ರತಿಕಾರ ತೀರಿಸಿಕೊಳ್ಳದಂತೆ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಫೋನ್ ಮಾಡಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
⭕️🛩️ STRUCK: The IDF completed a large-scale strike on strategic defense systems belonging to the Iranian terror regime.
— Israel Defense Forces (@IDF) June 8, 2026
Recently, defense systems were deployed across Iran to restore the regime’s capabilities degraded during Operation Roaring Lion. The strike led to the… pic.twitter.com/eEqV2QnXK3
ಇದೇ ವೇಳೆ, ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದದ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿವೆ ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಈ ಶಾಂತಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಮುಕ್ತಾಯಗೊಂಡು ಒಪ್ಪಂದಕ್ಕೆ ಸಹಿ ಬೀಳುವವರೆಗೂ ಇರಾನ್ ಮೇಲೆ ಮತ್ತು ಆಯಕಟ್ಟಿನ ಸಮುದ್ರ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಅವರು ದೃಢಪಡಿಸಿದ್ದಾರೆ.
ಪರಸ್ಪರರ ಆರ್ಥಿಕ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದ ವೈರಿ ದೇಶಗಳು
ಉಭಯ ದೇಶಗಳು ಶಾಂತಿ ಮಾತುಕತೆಗೆ ಒಲವು ತೋರುವ ಮುನ್ನ ಇರಾನ್ನ ನೈಋತ್ಯ ದಿಕ್ಕಿನಲ್ಲಿರುವ ‘ಮಹಶಹರ್’ ಪೆಟ್ರೋಕೆಮಿಕಲ್ ಕಾರ್ಖಾನೆ ಹಾಗೂ ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್ ವಾಯುಪಡೆ ಭೀಕರ ದಾಳಿ ನಡೆಸಿತ್ತು. ಇರಾನ್ ಈ ಇಂಧನ ಘಟಕಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆಗೆ ಬಳಸುತ್ತಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಇಸ್ರೇಲ್ನ ಪ್ರಮುಖ ನಗರಿ ‘ಹೈಫಾ’ದಲ್ಲಿರುವ ತೈಲ ಘಟಕವನ್ನೇ ಗುರಿಯಾಗಿಸಿ ಪ್ರತಿದಾಳಿ ನಡೆಸಿ ಭಾರಿ ಹಾನಿ ಉಂಟುಮಾಡಿತ್ತು. ಈ ಸಂಘರ್ಷದ ವೇಳೆ ಇರಾನ್ ಸುಮಾರು 30 ಕ್ಕೂ ಹೆಚ್ಚು ಅತ್ಯಾಧುನಿಕ ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಿತ್ತು ಎಂದು ಇಸ್ರೇಲ್ ಸೇನೆ ಹೇಳಿದೆ.
Both sides, Israel and Iran, are looking to do an immediate CEASEFIRE! Final negotiations on “Peace” are proceeding, subject to ignorance or stupidity getting in its way. The Blockade will remain in place, and in full force and effect, until a “Final Deal” is reached. Things… pic.twitter.com/qYKr8flknz
— Commentary Donald J. Trump Truth Social Posts On X (@TrumpTruthOnX) June 8, 2026
ಟ್ರುತ್ ಸೋಷಿಯಲ್ನಲ್ಲಿ ಟ್ರಂಪ್ ಮಾತು: ಇಸ್ರೇಲ್ ಮತ್ತು ಇರಾನ್ ದೇಶಗಳೆರಡೂ ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣದ ಕದನ ವಿರಾಮವನ್ನೇ ಬಯಸುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ತಮ್ಮ ‘ಟ್ರುತ್ ಸೋಷಿಯಲ್’ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಶಾಂತಿ ಮೂಡಿಸುವ ಕೊನೆಯ ಹಂತದ ಮಾತುಕತೆಗಳು ವೇಗವಾಗಿ ಪ್ರಗತಿಯಲ್ಲಿವೆ. ಯಾವುದೇ ತರಹದ ಮೂರ್ಖತನ ಈ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು ಅಷ್ಟೇ. ಅಂತಿಮ ತೀರ್ಮಾನವಾಗುವವರೆಗೂ ಇರಾನ್ ಮೇಲಿನ ಕಠಿಣ ದಿಗ್ಬಂಧನಗಳು ಮುಂದುವರಿಯಲಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
