ಶಿವಮೊಗ್ಗ: ಸಾಗರ (Sagara) ತಾಲ್ಲೂಕು ಅವಿನಹಳ್ಳಿ ಹೋಬಳಿ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜನಹೋರಾಟ ವೇದಿಕೆವತಿಯಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಅಣುಸ್ಥಾವರದಿಂದ ಅಲ್ಲಿನ ಜನರ ಬದುಕಿಗೆ ಮಾರಕವಾಗುವುದು ಬೇಡ ಎಂದು ಜನ ಆಗ್ರಹ ಮಾಡಿದ್ದಾರೆ,
ಎಲ್ಲಿ ಪ್ರತಿಭಟನೆ?
ನಾಳೆ ಬೆಳಿಗ್ಗೆ 10-30ಕ್ಕೆ ಸಾಗರದ ಶಿವಪ್ಪ ನಾಯ್ಕ ವೃತ್ತದಿಂದ ಈ ಪ್ರತಿಭಟನೆ ರ್ಯಾಲಿ ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ.
ಅಣುವಿದ್ಯುತ್ ಸ್ಥಾವರದಿಂದ ಆಗುವ ಪರಿಣಾಮಗಳು
1 ರಿಂದ 5 ವರ್ಷದ ಅಂದಾಜು
ಕೈಗ ಮತ್ತು ಕಾಸರಗೋಡು, ಹಂಡಿಗೋಡು ಅಧ್ಯಯನದ ವರದಿ ಪ್ರಕಾರ
- ರೈತರ ಬದುಕೇ ಸರ್ವನಾಶ
ರೈತರ ಭೂಮಿ ಫಲವತ್ತತೆ ವಾತಾವರಣದ ಉಷ್ಣತೆಯಿಂದ ಕಡಿಮೆಯಾಗಿ ಅಡಿಕೆ ಹಾಗೂ ಇತರೆ ಬೆಳೆಗಳ ಇಳುವರಿಲ್ಲಿ ಕುಂಠಿತ ಪ್ರಾಣಿ ಸಂಕುಲಗಳು ಮತ್ತು ಮನುಷ್ಯರು ದೀರ್ಘ ಕಾಲದ ಅನಾರೋಗ್ಯ ತುತ್ತಾಗಿ ಸರ್ವಾಂಗ ವೈಫಲ್ಯ, ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಸುಮಾರು 10 ರಿಂದ 9 ಜನರಲ್ಲಿ ಕಾಣಿಸಿಕೊಳ್ಳುತ್ತದೆ. - ಶೈಕ್ಷಣಿಕ ಸಂಸ್ಥೆಗಳ ಮೇಲೆ ಆಗುವ ಪರಿಣಾಮಗಳು
ಉದಾಹರಣೆಗೆ ವಿಕಿರಣದಿಂದಾಗಿ ವಿದ್ಯಾರ್ಥಿಗಳ ಬೌದ್ಧಿಕ ಗುಣಮಟ್ಟ ಕಡಿಮೆಯಾಗಿ ಹಾಜರಾತಿ ಕಡಿಮೆಯಾಗುವುದು. ವಿದ್ಯಾರ್ಥಿಗಳ ಜೀವನ ನಾಶವಾಗುವುದು. - ನೀರಾವರಿ ಮೂಲ
ಬಹುಗ್ರಾಮ ನೀರಾವರಿ ಮೂಲ ಶರಾವತಿಯಾಗಿದ್ದು ಸಾಗರ & ಹೊಸನಗರಕ್ಕೆ ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸುತ್ತಿರುವುದರಿಂದ ವಿಕಿರಣದಿಂದ ನೀರು ಮಲಿನವಾಗಿ ರೋಗ ಬಾಧೆಗಳು ದಿನೇ ದಿನೇ ಆವರಿಸುತ್ತವೆ. - ಪ್ರವಾಸೋದ್ಯಮ ಕೂಡ ಕುಂಠಿತಗೊಳ್ಳುತ್ತದೆ.
ಉದಾಹರಣೆಗೆ ಜೋಗ, ಇಕ್ಕೇರಿ, ಕೆಳದಿ, ವರದಹಳ್ಳಿ, ಸಿಗಂದೂರು ಕ್ಷೇತ್ರಕ್ಕೆ ಬರುವ ಯಾತ್ರಿಗಳು ಕ್ರಮೇಣ ಕಡಿಮೆಯಾಗುತ್ತಾರೆ. - ಎಲ್ಲಾ ವ್ಯಾಪಾರಸ್ಥರಿಗೂ ಮೀನುಗಾರಿಕೆ ಕೃಷಿ ಆಧಾರಿತ ಸಂಸ್ಥೆಗಳು, ಕುಟುಂಬಗಳು ಇದರ ಅವಲಂಬಿತ ಕೂಲಿ ಕಾರ್ಮಿಕರ ಕುಟುಂಬಗಳು, ಕೃಷಿ ಕಾರ್ಮಿಕ ಕುಟುಂಬಗಳು ಕಡಿಮೆಯಾಗುತ್ತವೆ.
- ಮಠಮಂದಿರಗಳು, ಸಂಸ್ಕೃತ ಅಧ್ಯಯನ ಕೇಂದ್ರಗಳು ಇದರ ವ್ಯಾಪ್ತಿಯ ಕ್ಷೀಣಿಸುತ್ತಾ ಬರುತ್ತವೆ. ಜೊತೆಗೆ ಶುಭ ಕಾರ್ಯಗಳು ನಿಲ್ಲುತ್ತವೆ. ವಧು ವರರು ಅವಿವಾಹಿತರಾಗಿ ಉಳಿದುಕೊಳ್ಳುವ ಸಂಭವ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಗರ್ಭಪಾತ ಸಮಸ್ಯೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ಇದು ಜನರ ಗೆಲುವಲ್ಲ, ಚುನಾವಣಾ ಆಯೋಗದ ಕೈಚಳಕ: ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ಕಿಡಿ!
