Vastu Tips: ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿದ್ರೆ ಸಕ್ಸಸ್‌ ಫಿಕ್ಸ್

Vastu tips which direction is best to keep calendar

ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿ ಬಹುತೇಕರು ತಮ್ಮ ಮನೆಗೆ ಹೊಸ ಕ್ಯಾಲೆಂಡರ್‌ಗಳನ್ನು ತರುತ್ತಾರೆ. ಆದರೆ, ವಾಸ್ತುಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಮನೆಯಲ್ಲಿ ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಹಾಕಬೇಕು ಎನ್ನುವುದಕ್ಕೆ ಮಹತ್ವದ ನಿಯಮಗಳಿವೆ. ತಪ್ಪಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಮನೆಯಲ್ಲಿ (Vastu Tips) ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ಅದು ನಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಹಾಗಾಗಿ ಕ್ಯಾಲೆಂಡರ್ ಹಾಕುವಾಗ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಅಗತ್ಯ.

ಈ ದಿಕ್ಕುಗಳು ಬಹಳ ಶುಭ

ವಾಸ್ತುಶಾಸ್ತ್ರದ ಪ್ರಕಾರ, ಕ್ಯಾಲೆಂಡರ್‌ಗಳನ್ನು ಹಾಕಲು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕುಗಳು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಪೂರ್ವ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ ಮತ್ತು ಪ್ರಗತಿಯ ಹಾದಿ ಸುಗಮವಾಗುತ್ತದೆ. ಉತ್ತರ ದಿಕ್ಕಿನಲ್ಲಿ ಹಣಕಾಸಿನ ಸಮೃದ್ಧಿಗಾಗಿ ನದಿ, ಜಲಪಾತ ಅಥವಾ ಸುಂದರ ಪ್ರಕೃತಿಯ ದೃಶ್ಯಗಳುಳ್ಳ ಕ್ಯಾಲೆಂಡರ್ ಹಾಕುವುದು ಉತ್ತಮ. ಇನ್ನು ಪಶ್ಚಿಮ ದಿಕ್ಕನ್ನು ಹರಿವಿನ ದಿಕ್ಕು ಎಂದು ಪರಿಗಣಿಸಲಾಗಿದ್ದು, ಇಲ್ಲಿ ಕ್ಯಾಲೆಂಡರ್ ಇಡುವುದರಿಂದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲು ಮತ್ತು ಆರ್ಥಿಕ ವೃದ್ಧಿಗೆ ನೆರವಾಗುತ್ತದೆ.

ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಬಾರದು

ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಕ್ಯಾಲೆಂಡರ್ ಹಾಕಬಾರದು. ದಕ್ಷಿಣ ದಿಕ್ಕು ಸ್ಥಿರತೆಯ ಸಂಕೇತವಾಗಿದ್ದು, ಇಲ್ಲಿ ಕ್ಯಾಲೆಂಡರ್ ಹಾಕುವುದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಮತ್ತು ಆರ್ಥಿಕ ಪ್ರಗತಿಗೆ ತಡೆಯಾಗಬಹುದು. ಅಲ್ಲದೆ, ಮನೆಯ ಮುಖ್ಯ ಬಾಗಿಲಿನ ಮೇಲೆ ಅಥವಾ ಬಾಗಿಲಿಗೆ ಅಂಟಿಕೊಂಡಂತೆ ಕ್ಯಾಲೆಂಡರ್ ಹಾಕುವುದನ್ನು ತಪ್ಪಿಸಬೇಕು. ಇದು ಮನೆಯೊಳಗೆ ಬರುವ ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ ಮತ್ತು ಕುಟುಂಬದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಬಹುದು.

ಹೊಸ ಕ್ಯಾಲೆಂಡರ್ ತಂದಾಗ, ಹಳೆಯ ಕ್ಯಾಲೆಂಡರ್‌ಗಳನ್ನು ಗೋಡೆಯಿಂದ ತೆಗೆದುಹಾಕುವುದು ಅತ್ಯಗತ್ಯ. ಹಳೆಯ ಕ್ಯಾಲೆಂಡರ್ ಎಂದರೆ ಗತಕಾಲದ ಶಕ್ತಿಯ ಸಂಕೇತ, ಅದನ್ನು ಹಾಗೆಯೇ ಇಟ್ಟುಕೊಳ್ಳುವುದು ಹೊಸ ಅವಕಾಶಗಳಿಗೆ ಅಡ್ಡಿಯಾಗಬಹುದು ಎಂದು ನಂಬಲಾಗಿದೆ. ಹೊಸ ಕ್ಯಾಲೆಂಡರ್ ಅನ್ನು ಹಳೆಯದರ ಮೇಲೆ ಹಾಕುವ ಕೆಲಸವಂತೂ ಮಾಡಲೇಬಾರದು. ಇದಲ್ಲದೆ, ಮುರಿದುಹೋದ, ಹರಿದುಹೋದ ಅಥವಾ ಹಿಂಸಾತ್ಮಕ ದೃಶ್ಯಗಳು, ಒಣಗಿದ ಮರಗಳು ಅಥವಾ ದುಃಖಕರ ಚಿತ್ರಗಳಿರುವ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡಬೇಡಿ. ಇವು ಮನೆಯಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ. ಪ್ರಕೃತಿ, ಸುಂದರ ದೃಶ್ಯಗಳು ಅಥವಾ ಶುಭ ಚಿಹ್ನೆಗಳಿರುವ ಕ್ಯಾಲೆಂಡರ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಸಿಗುತ್ತೆ ಈ ಪ್ರಯೋಜನಗಳು

Leave a Reply

Your email address will not be published. Required fields are marked *