Elon Musk: ವಾಟ್ಸಾಪ್‌ ನಂಬಲು ಅರ್ಹವಲ್ಲ ಎಂದ ಎಲಾನ್‌ ಮಸ್ಕ್

Elon Musk says he cant trust whatsapp

ನವದೆಹಲಿ: ಖಾಸಗಿ ಸಂದೇಶಗಳ ರಕ್ಷಣೆ ವಿಚಾರದಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂಬ ಆರೋಪದ ಮೇಲೆ ಮೆಟಾ ಕಂಪನಿಯು ಅಮೆರಿಕದಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿದೆ. ಈ ವಿವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಎಕ್ಸ್ ಮಾಲೀಕ ಎಲಾನ್ ಮಸ್ಕ್ (Elon Musk) ಅವರು ವಾಟ್ಸಾಪ್ ಅನ್ನು ನಂಬಬೇಡಿ ಎಂದು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಸುರಕ್ಷಿತವಲ್ಲ ಎಂದು ಹೇಳಿರುವ ಮಸ್ಕ್, ಸುರಕ್ಷಿತ ಕರೆಗಳಿಗಾಗಿ ತಮ್ಮದೇ ಆದ ‘ಎಕ್ಸ್’ ವೇದಿಕೆಯನ್ನು ಬಳಸುವಂತೆ ಕರೆ ನೀಡಿದ್ದಾರೆ.

ಮಸ್ಕ್‌ಗೆ ಸಾಥ್‌ ನೀಡಿದ ಟೆಲಿಗ್ರಾಂ

ಈ ವಾಗ್ವಾದಕ್ಕೆ ಟೆಲಿಗ್ರಾಂ ಮುಖ್ಯಸ್ಥ ಪಾವೆಲ್ ಡುರೊವ್ ಕೂಡ ಧ್ವನಿಗೂಡಿಸಿದ್ದು, ವಾಟ್ಸಾಪ್‌ನ ಎನ್‌ಕ್ರಿಪ್ಶನ್ ವ್ಯವಸ್ಥೆಯು ಇತಿಹಾಸದಲ್ಲೇ ಅತಿದೊಡ್ಡ ಗ್ರಾಹಕ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ. ಬಿಲಿಯನ್ಗಟ್ಟಲೆ ಜನರನ್ನು ಮರಳು ಮಾಡುತ್ತಿರುವ ವಾಟ್ಸಾಪ್, ಅವರ ಸಂದೇಶಗಳನ್ನು ರಹಸ್ಯವಾಗಿ ಓದುತ್ತಿದೆ ಮತ್ತು ಮೂರನೇ ವ್ಯಕ್ತಿಗಳಿಗೆ ಮಾಹಿತಿ ಹಂಚುತ್ತಿದೆ ಎಂಬುದು ಇವರ ವಾದ. ಆದರೆ, ಟೆಲಿಗ್ರಾಂ ಕೂಡ ತನ್ನ ಸಾಮಾನ್ಯ ಚಾಟ್‌ಗಳಲ್ಲಿ ಪೂರ್ಣ ಪ್ರಮಾಣದ ಭದ್ರತೆ ನೀಡುವುದಿಲ್ಲ ಎಂಬ ಟೀಕೆಗಳು ಇವೆ.

ಈ ಎಲ್ಲಾ ಆರೋಪಗಳನ್ನು ಮೆಟಾ ಕಂಪನಿಯು ಕಟ್ಟುನಿಟ್ಟಾಗಿ ನಿರಾಕರಿಸಿದೆ. ಕಳೆದ ಒಂದು ದಶಕದಿಂದ ತಾವು ಅತ್ಯಂತ ಸುಧಾರಿತ ‘ಸಿಗ್ನಲ್ ಪ್ರೋಟೋಕಾಲ್’ ಬಳಸುತ್ತಿದ್ದು, ಸಂದೇಶಗಳನ್ನು ಕಳುಹಿಸುವವರು ಮತ್ತು ಪಡೆಯುವವರನ್ನು ಬಿಟ್ಟರೆ ಕಂಪನಿಗೂ ಓದಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ. ಮಸ್ಕ್ ಅವರ ಹೇಳಿಕೆಗಳು ಆಧಾರರಹಿತವಾಗಿದ್ದು, ವ್ಯವಸ್ಥೆಯಲ್ಲಿ ಯಾವುದೇ ರಹಸ್ಯ ಕಿಂಡಿ (ಬ್ಯಾಕ್‌ಡೋರ್) ಇಲ್ಲ ಎಂದು ಕಂಪನಿ ಸಮರ್ಥಿಸಿಕೊಂಡಿದೆ. ಅಮೆರಿಕದ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಭದ್ರತೆಯ ಕುರಿತಾದ ಅಂತಿಮ ಸತ್ಯ ಸದ್ಯದಲ್ಲೇ ಹೊರಬೀಳಲಿದೆ.

ಇದನ್ನೂ ಓದಿ: ಹಾರ್ಮುಜ್ ಬದಲು ಪರ್ಯಾಯ ಮಾರ್ಗ ನೀಡಿದ ಇರಾನ್

Leave a Reply

Your email address will not be published. Required fields are marked *