Toxic: ಬರೊಬ್ಬರಿ 3 ಗಂಟೆ 6 ನಿಮಿಷ ಇದೆಯಾ ಯಶ್ ಸಿನಿಮಾ? ‘ಟಾಕ್ಸಿಕ್’ ಸೆನ್ಸಾರ್ ಪ್ರಕ್ರಿಯೆ ಮೇಲೆ ಎಲ್ಲರ ಕಣ್ಣು!
ಬೆಂಗಳೂರು: ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟದವರೆಗೆ ಭಾರಿ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಪ್ರೇಕ್ಷಕರೆದುರು ಬರಲು ದಿನಗಣನೆ ಆರಂಭವಾಗಿದೆ. ದೇಶದ ಅತ್ಯಂತ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಈ ಸಿನಿಮಾದ ಟೀಸರ್ ಮತ್ತು ಪೋಸ್ಟರ್‌ಗಳು ಈಗಾಗಲೇ ಸಿನಿರಸಿಕರಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡಿವೆ. ಇಂದು ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಅನಾವರಣಗೊಳ್ಳಲಿದ್ದು, ಇದೇ ಬೆನ್ನಲ್ಲೇ ಸಿನಿಮಾದ ರನ್‌ಟೈಮ್ (ಅವಧಿ) ಕುರಿತು ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ೩ ಗಂಟೆಗೂ ಅಧಿಕ ಅವಧಿಯ ಸಿನಿಮಾ? ಚಿತ್ರರಂಗದ…
