ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ಅವರ ‘ಸೈಲೆಂಟ್ ಆಪರೇಷನ್’ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಅವರ ಆಪ್ತ ಗೆಳತಿ ಹಾಗೂ ಖ್ಯಾತ ನಟಿ ತ್ರಿಷಾ ಕೃಷ್ಣನ್ (Trisha Krishnan) ಈ ಹಿಂದೆ ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ನೀಡಿದ್ದ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ.
ಅಂದು ಇಷ್ಟವಾಗದ ಮೌನ: ವಿಜಯ್ ಮತ್ತು ತ್ರಿಷಾ ತೆರೆಯ ಮೇಲೆ ಹಿಟ್ ಜೋಡಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ದಶಕಗಳ ಸ್ನೇಹ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯ್ ಅವರ ಮೌನದ ಬಗ್ಗೆ ಮಾತನಾಡಿದ್ದ ತ್ರಿಷಾ, “ಸಿನಿಮಾ ಸೆಟ್‌ಗಳಲ್ಲಿ ವಿಜಯ್ ಅತ್ಯಂತ ಶಾಂತವಾಗಿರುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ನಾವೆಲ್ಲರೂ ಹರಟೆ ಹೊಡೆಯುತ್ತಿದ್ದರೆ, ಅವರು ಮಾತ್ರ ಏಕಾಂಗಿಯಾಗಿ ಕುಳಿತಿರುತ್ತಾರೆ. ಅವರ ಈ ಅತಿಯಾದ ಮೌನ ಆರಂಭದಲ್ಲಿ ನನಗೆ ವಿಚಿತ್ರ ಮತ್ತು ಅಸಹನೀಯ ಎನಿಸುತ್ತಿತ್ತು. ಈ ಕಾರಣಕ್ಕೆ ಅವರ ಬಗ್ಗೆ ನನಗೆ ತಪ್ಪು ಕಲ್ಪನೆ ಕೂಡ ಇತ್ತು” ಎಂದು ನೆನಪಿಸಿಕೊಂಡಿದ್ದರು.
ರಾಜಕೀಯಕ್ಕೆ ಬಲ ನೀಡಿದ ‘ಸೈಲೆಂಟ್ ಕಿಲ್ಲರ್’ ಇಮೇಜ್: ವಿಜಯ್ ಅವರ ನಿಗೂಢ ವ್ಯಕ್ತಿತ್ವವನ್ನು ತ್ರಿಷಾ ಅಂದು ‘ಸೈಲೆಂಟ್ ಕಿಲ್ಲರ್’ ಎಂದು ಕರೆದಿದ್ದರು. ಹೆಚ್ಚಾಗಿ ಮಾತನಾಡದಿದ್ದರೂ ತಮ್ಮ ಮೌನದ ಮೂಲಕವೇ ಜನರನ್ನು ಸೆಳೆಯುವ ವಿಜಯ್ ಅವರ ಈ ಗುಣವೇ ಈಗ ರಾಜಕೀಯದಲ್ಲೂ ಮ್ಯಾಜಿಕ್ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿನಿಮಾ ಸೆಟ್‌ಗಳಲ್ಲಿ ಯಾವ ಗೋಡೆ ಮುಖ ಮಾಡಿ ವಿಜಯ್ ಕುಳಿತುಕೊಳ್ಳುತ್ತಿದ್ದರೋ, ಅದೇ ಮೌನವೇ ಇಂದು ರಾಜಕೀಯ ಎದುರಾಳಿಗಳನ್ನು ತಬ್ಬಿಬ್ಬು ಮಾಡುವಂತೆ ಮಾಡಿದೆ.
ಗದ್ದುಗೆ ಏರಲು ಮೌನವೇ ಅಸ್ತ್ರ: ಚುನಾವಣಾ ಫಲಿತಾಂಶದ ಬಳಿಕ ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆ ಎದುರಾದಾಗಲೂ ವಿಜಯ್ ಯಾವುದೇ ಆತುರ ತೋರದೆ ಮೌನವಾಗಿಯೇ ತಮ್ಮ ತಂತ್ರ ರೂಪಿಸಿದ್ದಾರೆ. ತ್ರಿಷಾ ಅಂದು ಯಾವ ಗುಣವನ್ನು ಟೀಕಿಸಿದ್ದರೋ, ಅದೇ ಮೌನದ ಮೂಲಕ ವಿಜಯ್ ಈಗ ಎಡಪಕ್ಷಗಳ ಬೆಂಬಲ ಗಳಿಸಿ ಮುಖ್ಯಮಂತ್ರಿ ಗದ್ದುಗೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿಜಯ್ ಅವರ ಈ ‘ಸೈಲೆಂಟ್ ಚೆಕ್‌ಮೇಟ್’ ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ.
ಇದನ್ನೂ ಓದಿ: ಶ್ರೀದೇವಿ ಆಸ್ತಿ ವಿವಾದ ಅಂತ್ಯ: ಬೋನಿ ಕಪೂರ್ ಮತ್ತು ಪುತ್ರಿಯರ ಪರವಾಗಿ ಮದ್ರಾಸ್ ಹೈಕೋರ್ಟ್ ತೀರ್ಪು
