Weight Loss: ತೂಕ ಇಳಿಸಲು ಬೆಳಗಿನ ತಿಂಡಿಗೆ ಇಡ್ಲಿ ಉತ್ತಮವಾ ಅಥವಾ ದೋಸೆಯಾ? ಪೌಷ್ಟಿಕಾಂಶ ತಜ್ಞರ ಸಲಹೆ ಇಲ್ಲಿದೆ
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದಾಗ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಅತ್ಯಗತ್ಯ. ಅದರಲ್ಲೂ ದಿನದ ಮೊದಲ (Weight Loss) ಆಹಾರವಾದ ಬೆಳಗಿನ ಉಪಾಹಾರದಲ್ಲಿ ಏನು ಸೇವಿಸಬೇಕು ಎನ್ನುವ ಕುರಿತು ಹಲವರಲ್ಲಿ ಸಹಜವಾಗಿಯೇ ಗೊಂದಲವಿರುತ್ತದೆ. ದಕ್ಷಿಣ ಭಾರತದ ಜನಪ್ರಿಯ ತಿಂಡಿಗಳಾದ ಇಡ್ಲಿ ಮತ್ತು ದೋಸೆ ಹೆಚ್ಚಿನವರ ಮೆಚ್ಚಿನ ಆಹಾರ. ಇವೆರಡನ್ನೂ ಅಕ್ಕಿ ಮತ್ತು ಉದ್ದಿನ ಬೇಳೆಯಿಂದಲೇ ತಯಾರಿಸಲಾಗುತ್ತದೆ. ಆದರೆ ತಯಾರಿಸುವ ವಿಧಾನದಲ್ಲಿ ವ್ಯತ್ಯಾಸವಿರುವುದರಿಂದ ದೋಸೆಗೆ ಎಣ್ಣೆ ಅಥವಾ ತುಪ್ಪದ ಅವಶ್ಯಕತೆ ಬೀಳುತ್ತದೆ. ಹಾಗಾದರೆ…
