SIR: ರಾಜ್ಯದಲ್ಲಿ 4.49 ಕೋಟಿಗೆ ಏರಿಕೆಯಾದ ಒಟ್ಟು ಮತದಾರರ ಸಂಖ್ಯೆ: ಆಯೋಗದಿಂದ ಅಧಿಕೃತ ಅಂಕಿ-ಅಂಶ ಪ್ರಕಟ!
ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಪರಿಶೀಲನಾ ಪ್ರಕ್ರಿಯೆಯ ನಂತರ ರಾಜ್ಯದ ಒಟ್ಟು ಮತದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ (SIR) ಏರಿಕೆ ಕಂಡುಬಂದಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಬೃಹತ್ 4,49,81,740 (4.49 ಕೋಟಿ) ಗಡಿ ತಲುಪಿದೆ ಎಂದು ರಾಜ್ಯ ಚುನಾವಣಾ ಆಯೋಗವು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 25ರವರೆಗಿನ ವರದಿಯಂತೆ ರಾಜ್ಯದಲ್ಲಿ ಒಟ್ಟು 4,48,44,080 ಮತದಾರರಿದ್ದರು. ಆದರೆ ತದನಂತರ ನಡೆದ ನೋಟಿಸ್ ಜಾರಿ, ಪರಿಶೀಲನೆ…
