Bird Flu: ತುಮಕೂರಿನಲ್ಲಿ ನವಿಲುಗಳ ಮಾರಣಹೋಮ: ಹಕ್ಕಿಜ್ವರಕ್ಕೆ ಮತ್ತೆರಡು ಬಲಿ
ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸಾವು ಮುಂದುವರಿದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಹಕ್ಕಿಜ್ವರದ (Bird Flu) ಬಾಧೆಯಿಂದಾಗಿ ತಾಲೂಕಿನ ಗೂಳರಿವೆ ಗ್ರಾಮದ ‘ಸುಣ್ಣಕಲ್ಲು ಕಟ್ಟೆ’ ಬಳಿ ಮತ್ತೆರಡು ನವಿಲುಗಳು ಮೃತಪಟ್ಟಿವೆ. ಈ ಭಾಗದಲ್ಲಿ ಸತತವಾಗಿ ನವಿಲುಗಳು ಸಾವನ್ನಪ್ಪುತ್ತಿರುವುದು ಪ್ರಕೃತಿ ಪ್ರೇಮಿಗಳ ನಿದ್ರೆ ಗೆಡಿಸಿದೆ. ಬೀದಿ ನಾಯಿಗಳ ಪಾಲಾದ ಮೃತದೇಹ: ಘಟನಾ ಸ್ಥಳದಲ್ಲಿ ಮೃತ ನವಿಲುಗಳ ದೇಹಗಳು ಅನಾಥವಾಗಿ ಬಿದ್ದಿದ್ದು, ಅವುಗಳನ್ನು ಬೀದಿ ನಾಯಿಗಳು ಕಿತ್ತು ತಿನ್ನುತ್ತಿರುವ ದೃಶ್ಯ ಮನಕಲಕುವಂತಿದೆ. ಇತ್ತೀಚೆಗಷ್ಟೇ ಈ ಭಾಗದಲ್ಲಿ…
