Talakaveri: ಅಕ್ಟೋಬರ್ 17ಕ್ಕೆ ತಲಕಾವೇರಿ ತೀರ್ಥೋದ್ಭವ: ರಾತ್ರಿ 7:50 ಕ್ಕೆ ಪುಣ್ಯ ತೀರ್ಥ ಪ್ರಸಾದ, ಕೊಡಗಿನಲ್ಲಿ ಭಕ್ತಸಾಗರ!
ಮಡಿಕೇರಿ: ಪವಿತ್ರ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ (Talakaveri) ಅಕ್ಟೋಬರ್ 17ರ ಗುರುವಾರ ರಾತ್ರಿ 7:50 ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ ಜರುಗಲಿದೆ. ಪವಿತ್ರ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನ ನೀಡುವ ಈ ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಹಾಗೂ ತೀರ್ಥ ಪ್ರಸಾದ ಸ್ವೀಕರಿಸಲು ನಾಡಿನಾದ್ಯಂತ ಲಕ್ಷಾಂತರ ಭಕ್ತಾದಿಗಳು ಆಗಮಿಸಲಿದ್ದಾರೆ. ಮಡಿಕೇರಿ ದಸರಾ ಮಹೋತ್ಸವದ ವೈಭವದ ನಡುವೆಯೇ ಈ ಬಾರಿಯ ತೀರ್ಥೋದ್ಭವ ಸಂಭ್ರಮವೂ ಕೂಡಿ ಬಂದಿದ್ದು, ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಧಾರ್ಮಿಕ…
