AI: ಎಐ (AI) ಅಬ್ಬರ ತಣ್ಣಗಾಗುತ್ತಿದ್ದಂತೆ ಭಾರತಕ್ಕೆ ಮತ್ತೆ ಸಿಕ್ಕಿತು ಜಾಗತಿಕ ಗದ್ದುಗೆ: ದಕ್ಷಿಣ ಕೊರಿಯಾ, ತೈವಾನ್ ಮಾರುಕಟ್ಟೆಗಳು ಉಡೀಸ್!
ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅತಿಯಾದ ಕ್ರೇಜ್‌ನಿಂದಾಗಿ ಕಳೆದ ವಾರವಷ್ಟೇ ಭಾರತದ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಭಾರಿ ಮುಖಭಂಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಐ ವಲಯದ ಷೇರುಗಳು ದಿಢೀರನೆ ನೆಲಕಚ್ಚಿದ ಪರಿಣಾಮ ಈ ಎರಡೂ ದೇಶಗಳ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡು ಯಥಾಸ್ಥಾನಕ್ಕೆ ಮರಳಿವೆ. ಇದರ ನೇರ ಲಾಭ ಪಡೆದಿರುವ ಭಾರತೀಯ ಷೇರು ಬಜಾರ್, ಜಾಗತಿಕವಾಗಿ ತನ್ನ ಬಲಿಷ್ಠ 6ನೇ ಸ್ಥಾನವನ್ನು ಅತ್ಯಂತ ಯಶಸ್ವಿಯಾಗಿ ಮರಳಿ ಪಡೆದಿದೆ. ಒಂದೇ ವಾರದಲ್ಲಿ…
